ನವರಾತ್ರಿ ಸಂದರ್ಭದಲ್ಲಿ 24 ಗಂಟೆ ಯಾವುದೇ ಅಡ್ಡಿಯಿಲ್ಲದೇ ವಿದ್ಯುತ್ ಪೂರೈಕೆ ಮಾಡಿ ಯಶಸ್ವಿಯಾದ ಬಳಿಕ ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಜಿಲ್ಲೆಗಳಲ್ಲಿ 24 ತಾಸು, ಹಳ್ಳಿಗಳಲ್ಲಿ 18 ತಾಸು, ತಾಲೂಕು ಪ್ರದೇಶ ಹಾಗೂ ಬುಂದೇಲ್ ಖಂಡ ಭಾಗಗಳಲ್ಲಿ 20 ತಾಸು ವಿದ್ಯುತ್ ನೀಡಬೇಕೆಂದು ಇಂದು ಆದೇಶಿಸಿದ್ದಾರೆ.

ನವದೆಹಲಿ (ಏ.11): ನವರಾತ್ರಿ ಸಂದರ್ಭದಲ್ಲಿ 24 ಗಂಟೆ ಯಾವುದೇ ಅಡ್ಡಿಯಿಲ್ಲದೇ ವಿದ್ಯುತ್ ಪೂರೈಕೆ ಮಾಡಿ ಯಶಸ್ವಿಯಾದ ಬಳಿಕ ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿಲ್ಲೆಗಳಲ್ಲಿ 24 ತಾಸು, ಹಳ್ಳಿಗಳಲ್ಲಿ 18 ತಾಸು, ತಾಲೂಕು ಪ್ರದೇಶ ಹಾಗೂ ಬುಂದೇಲ್ ಖಂಡ ಭಾಗಗಳಲ್ಲಿ 20 ತಾಸು ವಿದ್ಯುತ್ ನೀಡಬೇಕೆಂದು ಇಂದು ಆದೇಶಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗ್ರಾಮೀಣ ಭಾಗಗಳಲ್ಲಿ ಟ್ರಾನ್ಸ್ ಫಾರ್ಮಾರ್ ಸುಟ್ಟು ಹೋಗಿದ್ದರೆ ಕೂಡಲೇ ಸರಿಪಡಿಸಿ. ಇದರಿಂದಾಗಿ ಕೃಷಿ ಚಟುವಟಿಕೆಗಳಿಕೆ ಅಡ್ಡಿಯಾಗಬಾರದು. ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸಲು ಅನುಕೂಲವಾಗಲು ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ನಿರಂತರವಾಗಿ ವಿದ್ಯುತ್ ನೀಡಿ ಎಂದು ಆದಿತ್ಯನಾಥ್ ಇಂಧನ ಇಲಾಖೆಗೆ ಸೂಚಿಸಿದ್ದಾರೆ.