ಬಿಜೆಪಿ ಶಾಸಕರ  ವಿರುದ್ಧ ಸಿಬಿಐ ಬುಧವಾರ ಆರೋಪಪಟ್ಟಿಯನ್ನು ದಾಖಲು ಮಾಡಿದೆ. ಬಿಜೆಪಿ ಶಾಸಕ ಎಸಗಿದ ಗಂಭೀರ ಪ್ರಕರಣವೊಂದರ ಸಂಬಂಧ ಆರೋಪ ಪಟ್ಟಿಯನ್ನು ದಾಖಲು ಮಾಡಲಾಗಿದೆ. 

ಲಖನೌ: ಉನ್ನಾವೋದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಬಿಜೆಪಿ ಶಾಸಕ ಕುಲ್ದೀಪ್‌ಸಿಂಗ್‌ ಸೆಂಗರ್‌ ವಿರುದ್ಧ ಸಿಬಿಐ ಬುಧವಾರ ಆರೋಪಪಟ್ಟಿದಾಖಲಿಸಿದೆ.

ಕುಲ್ದೀಪ್‌ ಹಾಗೂ ಸಹವರ್ತಿ ಶಶಿ ಸಿಂಗ್‌ ವಿರುದ್ಧ ಪೋಕ್ಸೋ ಹಾಗೂ ಕ್ರಿಮಿನಲ್‌ ಸಂಚಿನ ದೋಷಾರೋಪಣೆಯನ್ನು ಸಿಬಿಐನ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಉದ್ಯೋಗ ಕೊಡಿಸುವುದಾಗಿ ಬಾಲಕಿಯನ್ನು ಮನೆಗೆ ಕರೆಸಿಕೊಂಡಿದ್ದ ಶಾಸಕ ಕುಲ್ದೀಪ್‌, 2017ರ ಜೂ.4ರಂದು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಜೂ.1 ಮತ್ತು ಜೂ.20ದಂದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ ಎಂದು ಸಿಬಿಐ ಆರೋಪಿಸಿದೆ.