ಸಾಮಾನ್ಯವಾಗಿ ದೇವರಲ್ಲಿ ನಮಗೆ, ಊರಿಗೆಲ್ಲಾ ಒಳ್ಳೆಯದಾಗಲಿ ಅಂತ ಹರಕೆ ಹೊರೋದು ಕಾಮನ್ ಆದರೆ ಇಲ್ಲೊಬ್ಬರು ತನ್ನ ಶತ್ರು ನಾಶಕ್ಕೂ ದೇವರಿಗೆ ಪತ್ರವನ್ನು ಬರೆದು ಹುಂಡಿಯಲ್ಲಿ ಹಾಕಿರೋ ಘಟನೆ ಬಾಗಲಕೋಟೆ ಜಿಲ್ಲೆಯ ತುಳಸಿಗೇರಿಯಲ್ಲಿ ನಡೆದಿದೆ.
ಬಾಗಲಕೋಟೆ(ಜೂ.10): ಸಾಮಾನ್ಯವಾಗಿ ದೇವರಲ್ಲಿ ನಮಗೆ, ಊರಿಗೆಲ್ಲಾ ಒಳ್ಳೆಯದಾಗಲಿ ಅಂತ ಹರಕೆ ಹೊರೋದು ಕಾಮನ್ ಆದರೆ ಇಲ್ಲೊಬ್ಬರು ತನ್ನ ಶತ್ರು ನಾಶಕ್ಕೂ ದೇವರಿಗೆ ಪತ್ರವನ್ನು ಬರೆದು ಹುಂಡಿಯಲ್ಲಿ ಹಾಕಿರೋ ಘಟನೆ ಬಾಗಲಕೋಟೆ ಜಿಲ್ಲೆಯ ತುಳಸಿಗೇರಿಯಲ್ಲಿ ನಡೆದಿದೆ.
ಉತ್ತರ ಕರ್ನಾಟಕದ ತಿರುಪತಿ ತಿಮ್ಮಪ್ಪನೆಂದೇ ಖ್ಯಾತಿ ಪಡೆದಿರುವ ತುಳಸಿಗೇರಿ ಹನಮಪ್ಪನಿಗೆ ಪತ್ರ ಬರೆದಿದ್ದಾನೆ. ಪ್ರತಿ ವಷ೯ದಂತೆ ಈ ವಷ೯ವೂ ದೇವರ ಕಾಣಿಕೆ ಹುಂಡಿಗಳಲ್ಲಿರುವ ಹಣದ ಎಣಿಕೆ ಮಾಡೋ ವೇಳೆ ಈ ಪತ್ರ ಪತ್ತೆಯಾಗಿದೆ. ಪತ್ರವನ್ನ ಯುವತಿ ಬರೆದಳೋ ಅಥವಾ ಯುವಕ ಬರೆದಿದ್ದಾನೋ ಅನ್ನೋದು ಕುತೂಹಲಕಾರಿಯಾಗಿದೆ.
ಈ ಬಾರಿ ೫ಲಕ್ಷಕ್ಕೂ ಅಧಿಕ ಹುಂಡಿ ಹಣ ಶೇಖರಣೆಯಾಗಿದ್ದು, ತಹಶೀಲ್ದಾರ ವಿನಯ್ ಕುಲಕರ್ಣಿ ನೇತೃತ್ವದಲ್ಲಿ ಎಣಿಕೆ ಕಾಯ೯ ನಡೆಸಲಾಗಿದೆ.
