ಒಂದುಕಾಲದಲ್ಲಿ ಉದ್ಯಾನ ನಗರಿ, ಪಿಂಚಣಿ ದಾರರ ಸ್ವರ್ಗ,ಕೆರೆಗಳ ನಗರವಾಗಿ ಗುರುತಿಸಿಕೊಂಡಿದ್ದ ಬೆಂಗಳೂರು ಇದೀಗ ಕಸದ ನಗರ, ರಸ್ತೆ-ಗುಂಡಿಗಳ ನಗರ, ಸಾಯುತ್ತಿರುವ ಕೆರೆಗಳ ನಗರ ಎಂಬ ಕುಖ್ಯಾತಿಗೆ ಕಾರಣವಾಗಿದೆ. ಇದಕ್ಕೆಲ್ಲ ಕಾರಣ ಬೆಂಗಳೂರಿನಲ್ಲಿ ಕಳೆದ 2013ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ 52.8 ರಷ್ಟು ಮಂದಿ ಮಾತ್ರ ಮತದಾನದ ಹಕ್ಕನ್ನು ಚಲಾಯಿಸಿದ್ದರು.
ಬೆಂಗಳೂರು(ಡಿ.11): 2018ನೇ ಸಾಲಿನ ವಿಧಾನಸಭಾ ಚುನಾವಣೆಗೆ ಕರ್ನಾಟಕ ಸಜ್ಜಾಗುತ್ತಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಮತದಾನವನ್ನು ಪ್ರೋತ್ಸಾಹಿಸಲು, ಹೊಸಬರನ್ನು ಮತದಾನದ ಪಟ್ಟಿಗೆ ಸೇರಿಸಲು ಯುನೈಟೆಡ್ ಬೆಂಗಳೂರು #RigisterToVote ಮೂಲಕ ನೂತನ ಅಭಿಯಾನಕ್ಕೆ ಮುಂದಾಗಿದೆ.
ಒಂದುಕಾಲದಲ್ಲಿ ಉದ್ಯಾನ ನಗರಿ, ಪಿಂಚಣಿ ದಾರರ ಸ್ವರ್ಗ,ಕೆರೆಗಳ ನಗರವಾಗಿ ಗುರುತಿಸಿಕೊಂಡಿದ್ದ ಬೆಂಗಳೂರು ಇದೀಗ ಕಸದ ನಗರ, ರಸ್ತೆ-ಗುಂಡಿಗಳ ನಗರ, ಸಾಯುತ್ತಿರುವ ಕೆರೆಗಳ ನಗರ ಎಂಬ ಕುಖ್ಯಾತಿಗೆ ಕಾರಣವಾಗಿದೆ. ಇದಕ್ಕೆಲ್ಲ ಕಾರಣ ಬೆಂಗಳೂರಿನಲ್ಲಿ ಕಳೆದ 2013ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ 52.8 ರಷ್ಟು ಮಂದಿ ಮಾತ್ರ ಮತದಾನದ ಹಕ್ಕನ್ನು ಚಲಾಯಿಸಿದ್ದರು.
ಆದ್ದರಿಂದ ನಮ್ಮ ನಗರವನ್ನು ಉಳಿಸಲು, ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಹೆಚ್ಚು ಹೆಚ್ಚು ಜನರು ಮತದಾನ ಮಾಡಬೇಕಾಗಿದೆ. ಹಾಗಾಗಿ ಮತದಾರರ ಪಟ್ಟಿಗೆ ಹೆಸರನ್ನು ನೋಂದಾಯಿಸಲು 9606056010ಗೆ ಮಿಸ್ ಕಾಲ್ ಕೊಡಿ. ಆ ಮೂಲಕ 2018ರ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಬದಲಾವಣೆ ತರಬಹುದು.