ಕೇಂದ್ರ ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವ ಡಾ. ಸತ್ಯಪಾಲ್ ಸಿಂಗ್ ಅವರು ಮಾವೋವಾದಿಗಳ ವಿರುದ್ಧ ಕಿಡಿಕಾರಿದ್ದಾರೆ.
ಮಣಿಪಾಲ್, [ಸೆ.27]: ಕೇಂದ್ರ ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವ ಡಾ. ಸತ್ಯಪಾಲ್ ಸಿಂಗ್ ಅವರು ಮಾವೋವಾದಿಗಳ ವಿರುದ್ಧ ಕಿಡಿಕಾರಿದ್ದಾರೆ.
ಗನ್ ಜತೆ ರೊಮಾನ್ಸ್ ಮಾಡುತ್ತಿರುವ ಮಾವೋವಾದಿ ಅಥವಾ ನಕ್ಸಲೀಯರಿಗೆ ಜನತೆಯ, ದೇಶದ ಅಭಿವೃದ್ಧಿಯ ಬಗ್ಗೆ ಯಾವುದೇ ಬದ್ಧತೆ ಇಲ್ಲ ಎಂದು ಡಾ. ಸತ್ಯಪಾಲ್ ಸಿಂಗ್ ಆರೋಪಿಸಿದ್ದಾರೆ.
ಮಣಿಪಾಲದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದ್ದು ನಕ್ಸಲ್ ವಾದಕ್ಕೆ ವಿರುದ್ಧವಾದ ಅಭಿವೃದ್ಧಿ ವಾದ. ನಕ್ಸಲರು ಮುಗ್ಧ ಜನರ ತಲೆಯನ್ನು ತಿರುಗಿಸಿ, ಮಾವೋ ಸಿದ್ಧಾಂತಗಳನ್ನು ಹಬ್ಬಿಸಿ ಹಿಂಸೆಯನ್ನು ಹೆಚ್ಚಿಸುವ ಬದಲು ಧನಾತ್ಮಕವಾದ ಅಭಿವೃದ್ಧಿಯ ಪರವಾದ ವಾದದೊಂದಿಗೆ ಮುಖ್ಯವಾಹಿನಿಗೆ ಬರಬೇಕು, ಅದಕ್ಕೆ ಸ್ವಾಗತ ಇದೆ ಎಂದು ಹೇಳಿದ್ದಾರೆ.
