ನವದೆಹಲಿ[ಅ.02]: ಸಾವಯವ ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದನದ ಸಗಣಿಯಿಂದ ತಯಾರಿಸಿದ ಸೋಪು ಹಾಗೂ ಬಿದಿರಿನಿಂದ ತಯಾರಿಸಲಾದ ನೀರಿನ ಬಾಟಲ್‌ಗಳನ್ನು ಮಂಗಳವಾರ ಬಿಡುಗಡೆ ಮಾಡಲಾಯಿತು.

ಖಾದಿ ಹಾಗೂ ಗ್ರಾಮೋದ್ಯೋಗ ಆಯೋಗದ ಮೂಲಕ ಈ ಉತ್ಪನ್ನಗಳನ್ನು ತಯಾರಿಸಲಾಗಿದ್ದು, ಸಚಿವ ಗಡ್ಕರಿ ಇವುಗಳನ್ನು ಬಿಡುಗಡೆ ಮಾಡಿದರು.

ಬಿದಿರಿನ ನೀರಿನ ಬಾಟಲ್‌ ದರ 560 ರು. ಹಾಗೂ 125 ಗ್ರಾಂನ ಸೋಪಿನ ಬೆಲೆ 125 ರು.ಗೆ ನಿಗದಿ ಮಾಡಲಾಗಿದೆ.