ಅಹಮದಾಬಾದ್(ಸೆ.04): ಸ್ವರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಹಮದಾಬಾದ್'ನ ಕೆಡಿ ಆಸ್ಪತ್ರೆಗೆ ಭೇಟಿ ನೀಡಿದ್ದ ಅಮನಿತ್ ಶಾ, ಆರೋಗ್ಯ ತಪಾಸಣೆಗೆ ಒಳಗಾದರು. ಕೆಲ ಹೊತ್ತು ಆಸ್ಪತ್ರೆಯಲ್ಲೇ ಇದ್ದ ಅಮಿತ್ ಶಾ ನಂತರ ಡಿಸ್ಚಾರ್ಜ್ ಆಗಿದ್ದಾರೆ. ಅಮಿತ್ ಶಾ ಕತ್ತು ನೋವಿನಿಂದ ಬಳಲುತ್ತಿದ್ದು, ರೆಗ್ಯುಲರ್ ಚೆಕ್ ಅಪ್ ಮಾಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಕೌಟುಂಬಿಕ ಕಾರ್ಯಕ್ರಮದ ನಿಮಿತ್ತ ಅಹಮದಾಬಾದ್'ಗೆ ಬಂದಿರುವ ಅಮಿತ್ ಶಾ, ನಾಳೆ ದೆಹಲಿಗೆ ಮರಳಿ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ ಎಂದು ರಾಜ್ಯ ಬಿಜೆಪಿ ಘಟಕ ತಿಳಿಸಿದೆ.