Asianet Suvarna News Asianet Suvarna News

ಮಂಡ್ಯ ಬಸ್ ದುರಂತ ಸಂತ್ರಸ್ತರಿಗೆ ಕೇಂದ್ರದಿಂದ 2 ಲಕ್ಷ ರೂ. ಪರಿಹಾರ: ಮೋದಿಗೆ HDK ಧನ್ಯವಾದ

30 ಜನರನ್ನು ಬಲಿ ಪಡೆದಿದ್ದ ಮಂಡ್ಯ ಬಸ್ ದುರಂತದ ಸಂತ್ರಸ್ತರಿಗೆ ಕೇಂದ್ರ ಸರಕಾರ ತಲಾ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಈ ವಿಚಾರವನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದು ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಅರ್ಪಿಸಿದ್ದಾರೆ.

Union Govt of India Announces 2 lakh compensation to Mandya Bus Tragedy family
Author
Bengaluru, First Published Jun 11, 2019, 11:08 PM IST

ಬೆಂಗಳೂರು[ಜೂ. 11]  ನವೆಂಬರ್ 24ರಂದು ಮಂಡ್ಯದ ಪಾಂಡವಪುರ ಕನಗನಮರಡಿ ನಲ್ಲಿ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ 30 ಜನರು ಅಸುನೀಗಿದ್ದರು. ಕರ್ನಾಟಕ ರಾಜ್ಯ ಸರಕಾರ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿತ್ತು. ಇದೀಗ ಕೇಂದ್ರ ಸರಕಾರ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದೆ.  ಅಂದರೆ ಸಂತ್ರಸ್ತರಿಗೆ 7 ಲಕ್ಷ ರೂ. ಪರಿಹಾರ ದೊರೆತಂತಾಗುತ್ತದೆ.

ಮಂಡ್ಯ ಬಸ್‌ ದುರಂತಕ್ಕೆ ಕಾರಣ ರಿವೀಲ್

ನವೆಂಬರ್ 24, 2018ರಂದು ಮಂಡ್ಯ ಜಿಲ್ಲೆ ಪಾಂಡವಪುರದ ವಿಸಿ ನಾಲೆಗೆ ಖಾಸಗಿ ಬಸ್ ಉರುಳಿತ್ತು.  ಪರಿಣಾಮ 30 ಮಂದಿ ಮೃತಪಟ್ಟಿದ್ದರು.

 

Follow Us:
Download App:
  • android
  • ios