ಕೇಂದ್ರದಿಂದ ರೈತರಿಗೆ ಮತ್ತೆ ಭರ್ಜರಿ ಗುಡ್ ನ್ಯೂಸ್

https://static.asianetnews.com/images/authors/b348a094-0bef-5801-a1f6-61e57071185f.jpg
First Published 18, Jul 2018, 10:01 AM IST
Union Govt Good News For Farmers
Highlights

ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ಪ್ರತಿ ಟನ್ ಕಬ್ಬಿನ ಬೆಲೆಯನ್ನು ಹೆಚ್ಚಳ ಮಾಡುವ ಕುರಿತು ಬುಧವಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. 

ನವದೆಹಲಿ: ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ಪ್ರತಿ ಟನ್ ಕಬ್ಬಿನ ಬೆಲೆಯನ್ನು ಹೆಚ್ಚಳ ಮಾಡುವ ಕುರಿತು ಬುಧವಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. 

ಸಕ್ಕರೆ ಕಾರ್ಖಾನೆಗಳು ರೈತರಿಂದ ಖರೀದಿಸುವ ಕಬ್ಬಿಗೆ ಪಾವತಿ ಸುವ ಬೆಲೆಯನ್ನು ಕ್ವಿಂಟಲ್‌ಗೆ ಕನಿಷ್ಠ 20 ರು. ಏರಿಕೆ ಮಾಡಬೇಕು ಎಂದು ಕೃಷಿ ವೆಚ್ಚ ಹಾಗೂ ಬೆಲೆ ಆಯೋಗ ಶಿಫಾರಸು ಮಾಡಿದೆ. 

ಈ ಪ್ರಸ್ತಾಪವನ್ನು ಬುಧವಾರ ನಡೆಯಲಿರುವ ಕೇಂದ್ರ ಆರ್ಥಿಕ ವ್ಯವಹಾರ ಗಳ ಸಂಪುಟ ಸಮಿತಿ ಸಭೆ ಪರಿಗಣಿಸಲಿದೆ. ಒಂದು ವೇಳೆ
ಕ್ವಿಂಟಲ್‌ಗೆ 20 ರು. ಬೆಲೆ ಹೆಚ್ಚಳ ಮಾಡಿದರೆ ಟನ್‌ಗೆ 200 ರು. ಆಗುತ್ತದೆ. ಅಕ್ಟೋಬರ್‌ನಿಂದ ಆರಂಭವಾಗಲಿರುವ ಕಟಾವು ಸೀಸನ್‌ನಲ್ಲಿ ಟನ್ ಕಬ್ಬಿಗೆ 2750  ರು. ಬೆಲೆ ನಿಗದಿಯಾ ಗಲಿದೆ. ಸದ್ಯ 2550 ರು. ಇದೆ. 

loader