Asianet Suvarna News Asianet Suvarna News

ಸರಕಾರಿ ನೌಕರರಿಗೆ ಶುಭ ಸುದ್ದಿ ನೀಡಿದ ಕೇಂದ್ರ ಸರಕಾರ

ಸರಕಾರಿ ನೌಕರರು ಇನ್ನು ಮುಂದೆ ರಿಯಾಯಿತಿ ದರದಲ್ಲಿ ವಿದೇಶ ಪ್ರಯಾಣ ಮಾಡಬಹುದು. ಪ್ರವಾಸಕ್ಕೆ ತೆರಳಲು ಬಯಸುವವರ ಅರ್ಧ ಖರ್ಚನ್ನು ಸರಕಾರವೇ ಕಡಿಮೆ ಮಾಡಲಿದೆ.

Union Govt employees may soon get allowance to visit Central Asian countries
Author
Bengaluru, First Published Jul 29, 2018, 4:24 PM IST

 

ನವದೆಹಲಿ[ಜು.29] ಕೇಂದ್ರ ಸರಕಾರ ನೌಕರರಿಗೆ ಶುಭ ಸುದ್ದಿಯೊಂದನ್ನು ನೀಡಿದೆ. ಸರಕಾರಿ ನೌಕರರು ಇನ್ನು ಮುಂದೆ ವಿದೇಶ ಪ್ರವಾಸ ಮಾಡಬಹುದು. ಹೌದು ಇಂಥದ್ದೊಂದು ಶುಭ ಸುದ್ದಿಯನ್ನು ಹಿರಿಯ ಅಧಿಕಾರಿಗಳು ಕನ್ಫರ್ಮ್ ಮಾಡಿದ್ದಾರೆ.

ಇಂಥದ್ದೊಂದು ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಲಾಗಿದ್ದು ಗೃಹ, ಪ್ರವಾಸೋದ್ಯಮ, ನಾಗರಿಕ ವಿಮಾನಯಾನ ಮತ್ತು ವೆಚ್ಚ ನಿರ್ವಹಣಾ ಇಲಾಖೆಗೆ ವರದಿ ಸಲ್ಲಿಸಲು ಕೋರಲಾಗಿದೆ.

ವಿದೇಶಾಂಗ ಇಲಾಖೆ  ಹೊಸ ಆಲೋಚನೆಯನ್ನು ಮುಂದೆ ಇಟ್ಟಿದ್ದು , ಕಜಕಿಸ್ತಾನ, ಉಜಬೇಕಿಸ್ತಾನ, ಕರ್ಗಿಸ್ತಾನ್, ಮತ್ತು ತಜಕಿಸ್ತಾನ್ ಕ್ಕೆ ನೌಕರರು ಪ್ರವಾಸ ಕೈಕೊಳ್ಳಬಹುದಾಗಿದೆ. ಇದರ ಆಧಾರದಲ್ಲಿ ಅಂದರೆ ಎಲ್ ಟಿಸಿ (ಲೀವ್ ಟ್ರಾವೆಲ್ ಕನ್ಸೆಷನ್)  ಪ್ರಯಾಣದ ಮೇಲೆ ವಿಶೇಷ ರಿಯಾಯಿತಿ ಪಡೆದುಕೊಳ್ಳಬಹುದು.

ಏಷ್ಯಾ ರಾಷ್ಟ್ರಗಳೊಂದಿಗಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲು ಮತ್ತು ವಿದೇಶಗಳಲ್ಲಿಯೂ ಭಾರತದ ಆಚರಣೆ, ವಿಚಾರ ಪಸರಿಸಲು  ಕೇಂದ್ರ ಸರಕಾರ ಹೊಸ ಆಲೋಚನೆಗೆ ಮುಂದಾಗಿದೆ. ಸಾರ್ಕ್ ರಾಷ್ಟ್ರಗಳೊಂದಿಗೂ ಉತ್ತಮ ಬಾಂಧವ್ಯ ಕಾಪಾಡಿಕೊಂಡು ಹೋಗುವುದು ಇದರ ಹಿಂದಿರುವ ಉದ್ದೇಶ. 

Follow Us:
Download App:
  • android
  • ios