ಕರ್ನಾಟಕದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ಹಂಪಿ ಸೇರಿದಂತೆ ದೇಶದ 10 ಪ್ರಮುಖ ತಾಣಗಳನ್ನು ಅತ್ಯುನ್ನತ ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕಳೆದ ಬಜೆಟ್‌ನಲ್ಲಿ ಈ ಕುರಿತು ಕೇಂದ್ರ ಸರ್ಕಾರ ಪ್ರಸ್ತಾಪ ಮಾಡಿತ್ತು. ಇದೀಗ ಆ 10 ನಗರಗಳ ಹೆಸರನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.

ನವದೆಹಲಿ: ಕರ್ನಾಟಕದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ಹಂಪಿ ಸೇರಿದಂತೆ ದೇಶದ 10 ಪ್ರಮುಖ ತಾಣಗಳನ್ನು ಅತ್ಯುನ್ನತ ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕಳೆದ ಬಜೆಟ್‌ನಲ್ಲಿ ಈ ಕುರಿತು ಕೇಂದ್ರ ಸರ್ಕಾರ ಪ್ರಸ್ತಾಪ ಮಾಡಿತ್ತು. ಇದೀಗ ಆ 10 ನಗರಗಳ ಹೆಸರನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.

ಹೀಗೆ ಗುರುತಿಸಿದ 10 ತಾಣಗಳಲ್ಲಿ ಸಮಗ್ರವಾಗಿ ಮೂಲಸೌಕರ್ಯ ಅಭಿವೃದ್ಧಿಗೊಳಿಸುವುದರ ಜೊತೆಗೆ ಸ್ಥಳೀಯರಿಗೆ ಕೌಶಾಲಭ್ಯವೃದ್ಧಿ ತರಬೇತಿ ನೀಡುವುದು ಕೇಂದ್ರದ ಗುರಿಯಾಗಿದೆ. ಹಂಪಿ ಈಗಾಗಲೇ ಯುನೆಸ್ಕೋ ವಿಶ್ವ ಪಾರಂಪರಿಕ ಸ್ಥಳಗಳ ಪಟ್ಟಿಯಲ್ಲಿ ಸೇರಿದೆ. 4 ಹಳ್ಳಿಗಳ 41.8 ಚ.ಕಿಮೀ ವ್ಯಾಪ್ತಿಯಲ್ಲಿನ 57 ಪ್ರಮುಖ ದೇಗುಲ, ಸ್ಥಳಗಳು ಹಂಪಿ ವ್ಯಾಪ್ತಿಯಲ್ಲಿ ಬರುತ್ತದೆ.

ಇತರೆ ಸ್ಥಳಗಳು: ಹಂಪಿಯಷ್ಟೇ ಅಲ್ಲದೆ, ತಾಜ್‌ಮಹಲ್‌, ಫತೇಪುರ್‌ ಸಿಕ್ರಿ, ಅಜಂತಾ ಮತ್ತು ಎಲ್ಲೋರಾ ಗುಹೆಗಳು, ಕೆಂಪುಕೋಟೆ, ಹುಮಾಯೂನ್‌ ಸಮಾಧಿ, ಕುತುಬ್‌ ಮಿನಾರ್‌, ಪುರಾನಾ ಖಿಲಾ, ಖಜುರಾಹೋ ದೇಗುಲಗಳ ಸಮೂಹ, ಮಹಾಬಲಿಪುರಂ, ಕೊನಾರ್ಕ್ನ ಸೂರ್ಯ ದೇಗುಲ, ಗೋಲ್ಕೊಂಡಾ ಕೋಟೆ.

ಪಾರಂಪರಿಕ ತಾಣಗಳ ಸುತ್ತಮುತ್ತಲೂ ಸ್ವಚ್ಛತೆ ಕಾಪಾಡುವುದು, ಈ ತಾಣಗಳ ಸುತ್ತಮುತ್ತಲ ಪ್ರದೇಶವನ್ನು ಪ್ಲಾಸ್ಟಿಕ್‌ ಮುಕ್ತಗೊಳಿಸುವುದು, ಈ ಪ್ರದೇಶಗಳಿಗೆ ತೆರಳಲು ಸೂಕ್ತ ಸಂಚಾರದ ವ್ಯವಸ್ಥೆ ಕಲ್ಪಿಸುವುದು, ಸೌಕರ್ಯ ಅಭಿವೃದ್ಧಿಗೆ ಖಾಸಗಿ ಸಹಕಾರ ಪಡೆಯುವುದು, ಸ್ಥಳ ಮಾಹಿತಿ ನೀಡಲು ತಂತ್ರಜ್ಞಾನ ಬಳಕೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಅಂಗವಿಕಲರಿಗೆ ಸೂಕ್ತ ಸಂಚಾರಕ್ಕೆ ಸೌಕರ್ಯ, ಶೌಚಾಲಯ ವ್ಯವಸ್ಥೆ, ಪಾರ್ಕಿಂಗ್‌ ವ್ಯವಸ್ಥೆ, ನಡೆದಾಡಲು ಪ್ರತ್ಯೇಕ ಪಥ, ಟಿಕೆಟ್‌ ಕೌಂಟರ್‌ ಮಾಡುವುದು ಪ್ರಮುಖವಾಗಿದೆ.