ನವದೆಹಲಿ[ಆ. 28]  ಈ ಹಿಂದೆ ಸಿಜೆಐ ವಿರುದ್ಧ ನ್ಯಾಯಮೂರ್ತಿಗಳು ಮಾಧ್ಯಮಗಳ ಮುಂದೆ ಅಸಮಾಧಾನ ಹೊರಹಾಕಿದ್ದವು. ಈ ಪ್ರಕರಣ ಒಂದು ಹಂತದಲ್ಲಿ ಕೇಂದ್ರ ಸರಕಾರದ ಮೇಲೂ ಆರೋಪ ಮಾಡಿತ್ತು.

ಅಕ್ಟೋಬರ್ 2ರಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ನಿವೃತ್ತಿಯಾಗಲಿದ್ದು, ಅವರ ಬಳಿಕ ಆ ಸ್ಥಾನಕ್ಕೆ ಜಸ್ಟಿಸ್ ರಂಜನ್ ಗಗೋಯ್ ನೇಮಕವಾಗುವ ಸಾಧ್ಯತೆ ಗಳಿವೆ ಎಂದು ಹೇಳಲಾಗಿದೆ.

ಕಾನೂನು ಸಚಿವಾಲಯ ತಮ್ಮ ಉತ್ತರಾಧಿಕಾರಿ ಅಥವಾ ಮುಂದಿನ ಸಿಜೆಐ ಸ್ಥಾನಕ್ಕೆ ವ್ಯಕ್ತಿಯ ಹೆಸರು ಶಿಫಾರಸು ಮಾಡಲು ಕೋರಿದೆ.  ದೀಪಕ್ ಮಿಶ್ರಾ ಸೆಪ್ಟೆಂಬರ್ 2ರಂದು ಕಾನೂನು ಸಚಿವಾಲಯಕ್ಕೆ ಪತ್ರ ಬರೆದು ತಮ್ಮ ಶಿಫಾರಸು ರವಾನೆ ಮಾಡಲಿದ್ದಾರೆ. 

ದೀಪಕ್ ಮಿಶ್ರಾ ಅವರ ಬಳಿಕ ಸೇವಾ ಹಿರಿತನದ ಆಧಾರದ ಮೇಲೆ ನಾಲ್ಕು ಮಂದಿ ನ್ಯಾಯಮೂರ್ತಿಗಳು ಹುದ್ದೆಗೆ ಪೈಪೋಟಿ ನಡೆಸಲಿದ್ದಾರೆ. ಜಸ್ಟಿಸ್ ರಂಜನ್ ಗಗೋಯ್ ಅಗ್ರ ಪೈಪೋಟಿಯಾಗಿದ್ದಾರೆ. ಆದರೆ ಇನ್ನು ಮುಂದಿನ ಬೆಳವಣಿಗೆಗಳು ಯಾವ ರೀತಿಯಾಗಿರಲಿವೆ ಎನ್ನುವುದು ಅಷ್ಟೆ ಮಹತ್ವದ್ದಾಗಿದೆ.