ನವದೆಹಲಿ[ಸೆ.26] ನ್ಯಾಶನಲ್ ಡಿಜಿಟಲ್ ಕಮ್ಯೂನಿಕೇಶನ್ ಪಾಲಿಸಿಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದ್ದು 2022ರೊಳಗಾಗಿ ನೂರು ಬಿಲಿಯನ್ ಡಾಲರ್ ಹೂಡಿಕೆ ಆಕರ್ಷಿಸುವುದರ ಜತೆಗೆ 4 ಮಿಲಿಯನ್  ಉದ್ಯೋಗ ಅವಕಾಶ ಸೃಷ್ಟಿ ಮಾಡುವ ಗುರಿ ಹೊಂದಿದೆ.

ಹೈ ಸ್ಪೀಡ್ ಬ್ರಾಡ್ ಬ್ಯಾಂಡ್ ಸೇವೆ ನೀಡುವುದು. 5ಜಿ ಸೇವೆ ನೀಡುವುದು, ಕಡಿಮೆ ದರದಲ್ಲಿ ಇಂಟರ್ ನೆಟ್ ಸೇವೆ ನೀಡುವ ಉದ್ದೇಶಗಳನ್ನು ಹೊಸ ನೀತಿ ಒಳಗೊಂಡಿದೆ.

ದೇಶದಾದ್ಯಂತ 50ಮೆಗಾ ಬೈಟ್ ಸ್ಟೀಡ್ ನಲ್ಲಿ ಸೇವೆ ನೀಡುವುದು. ತರಂಗಾಂತರ ಹಂಚಿಕೆಯಲ್ಲಿನ ಕೆಲ ಗೊಂದಲಗಳ ನಿವಾರಣೆಯನ್ನು ಹಂತಹಂತವಾಗಿ ಮಾಡಲಾಗುವುದು.