ನವದೆಹಲಿ [ಆ.01]: ವರ್ಷವೊಂದರಲ್ಲಿ 1 ಕೋಟಿ ರು.ಗಿಂತ ಹೆಚ್ಚು ಹಣವನ್ನು ಬ್ಯಾಂಕ್ ಖಾತೆಯಿಂದ ಹಿಂಪಡೆಯುತ್ತೀರಾ? ಮನೆ ನವೀಕರಣ, ಸಮಾರಂಭದ ಹೆಸರಿನಲ್ಲಿ ವೃತ್ತಿಪರರಿಗೆ 50 ಲಕ್ಷ ರು.ಗಿಂತ ಹೆಚ್ಚು ಹಣ ಪಾವತಿುತ್ತೀರಾ? ಹಾಗಿದ್ದರೆ ಇಂದಿನಿಂದ ನಿಮಗೆ ತೆರಿಗೆ ಹೊರೆ ಬೀಳಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜು. 5ರಂದು ಮಂಡನೆ ಮಾಡಿದ್ದ ಬಜೆಟ್‌ನಲ್ಲಿನ ಪ್ರಸ್ತಾವಗಳು ಸೆ. 1ರ ಭಾನುವಾರದಿಂದ ಜಾರಿಗೆ ಬರುತ್ತಿರುವ ಫಲ ಇದು. ಸಾಮಾನ್ಯವಾಗಿ ಏ. 1ರಿಂದ ಬಜೆಟ್ ಪ್ರಸ್ತಾವಗಳು ಅನುಷ್ಠಾನವಾಗಬೇಕು. ಆದರೆ ಈ ಬಾರಿ ಲೋಕಸಭೆ ಚುನಾವಣೆ ಮುಗಿದ ಬಳಿಕ ಪೂರ್ಣಾವಧಿ ಬಜೆಟ್ ಮಂಡನೆ ಮಾಡಿದ ಹಿನ್ನೆಲೆಯಲ್ಲಿ ತಡವಾಗಿ ಜಾರಿಯಾಗುತ್ತಿವೆ.

ವರ್ಷವೊಂದರಲ್ಲಿ ಯಾವುದೇ ಬ್ಯಾಂಕ್, ಸಹಕಾರಿ ಬ್ಯಾಂಕ್ ಅಥವಾ ಅಂಚೆ ಕಚೇರಿಯ ಖಾತೆಯಿಂದ 1 ಕೋಟಿ ರು. ಮೇಲ್ಪಟ್ಟು ನಗದನ್ನು ಹಿಂಪಡೆದರೆ ಶೇ. 2 ರಷ್ಟು ಟಿಡಿಎಸ್ ನೀಡಬೇಕು. ದೊಡ್ಡ ಮೊತ್ತದ ನಗದು ವ್ಯವಹಾರಕ್ಕೆ ಕಡಿವಾಣ ಹಾಕಿ, ಕಡಿಮೆ ನಗದು ವ್ಯವಹಾರ ಉತ್ತೇಜಿಸಲು ಈ ಕ್ರಮ ಕೈಗೊಂಡಿದೆ. 

ವಿಮೆ ಮೆಚುರಿಟಿ ಹಣಕ್ಕೆ ಶೇ. 5 ಟಿಡಿ ಎಸ್ ಬರಲಿದೆ. ಪ್ರೀಮಿಯಂ ಮೊತ್ತವನ್ನು ಬಿಟ್ಟು, ಉಳಿದ ಹಣಕ್ಕೆ ಟಿಡಿಎಸ್ ಇರಲಿದೆ. ವಾರ್ಷಿಕ ಪ್ರೀಮಿಯಂ ಮೊತ್ತ ಒಟ್ಟು ವಿಮಾ ಮೊತ್ತದ ಶೇ. 10 ಕ್ಕಿಂತ ಒಳಗಿದ್ದರೆ ತೆರಿಗೆ ವಿನಾಯ್ತಿ ಈವರೆಗೆ ಇತು ಈವರೆಗೆ 50 ಸಾವಿರ ರು. ಮೇಲ್ಪಟ್ಟವ್ಯವಹಾರದ ಕುರಿತು ಬ್ಯಾಂಕುಗಳು ಸರ್ಕಾರಕ್ಕೆ ಮಾಹಿತಿ ನೀಡುತ್ತಿದ್ದವು. ಆದರೆ ಇನ್ನು ಮುಂದೆ ಸಣ್ಣ ಪುಟ್ಟ ಮೊತ್ತದ ಮಾಹಿತಿಯನ್ನೂ
ಸರ್ಕಾರಕ್ಕೆ ನೀಡಬೇಕು. ಇದನ್ನು ಆದಾಯ ತೆರಿಗೆ ರಿಟರ್ನ್ ಜತೆ ಸರ್ಕಾರ ತಾಳೆ ಹಾಕುತ್ತದೆ. ಪ್ಯಾನ್ ಕಾರ್ಡ್ ಹೊಂದಿಲ್ಲದ ವ್ಯಕ್ತಿಗಳು ಹಣಕಾಸು ವ್ಯವಹಾರದ ಸಂದರ್ಭದಲ್ಲಿ ಆಧಾರ್ ನಮೂದಿಸಿದರೂ ಸಾಕು ಎಂದು ಸರ್ಕಾರ ಬಜೆಟ್‌ನಲ್ಲಿ ಹೇಳಿತ್ತು. ಅಲ್ಲದೆ ಅಂತಹ ವ್ಯಕ್ತಿಗಳಿಗೆ ತಾನಾಗಿಯೇ ಪ್ಯಾನ್ ಕಾರ್ಡ್ ರವಾನಿಸುವುದಾಗಿಯೂ ತಿಳಿಸಿತ್ತು. ಅದು ಕೂಡ ಸೆ.1 ರಿಂದ ಜಾರಿಗೆ ಬರಲಿದೆ. 

 50 ಲಕ್ಷ  ರು. ಬಿಲ್ ಕೊಟ್ಟರೆ 5% ಟಿಡಿಎಸ್ ವ್ಯಕ್ತಿಗಳು ಹಾಗೂ ಹಿಂದು ಅವಿಭಜಿತ ಕುಟುಂಬಗಳು ಗುತ್ತಿಗೆದಾರರು ಮತ್ತು ವೃತ್ತಿಪರರಿಗೆ ವರ್ಷವೊಂದರಲ್ಲಿ ೫೦ ಲಕ್ಷ ರು. ಮೇಲ್ಪಟ್ಟು ಹಣ ಪಾವತಿಸಿದರೆ, ಶೇ. 5 ರಷ್ಟು ಟಿಡಿಎಸ್ ಕಟ್ಟಬೇಕಾಗುತ್ತದೆ. ಮನೆ ನವೀಕರಣ, ಮದುವೆ ಸಮಾರಂಭ ಅಥವಾ ಇನ್ನಿತರೆ ಉದ್ದೇಶಗಳಿಗೆ ದುಬಾರಿ ಹಣ ವ್ಯಯಿಸುವವರಿಗೆ ತೆರಿಗೆ ಬೀಳುತ್ತದೆ. ಆಸ್ತಿ ಖರೀದಿಯ ಹೆಚ್ಚುವರಿ ವೆಚ್ಚಕ್ಕೆ 
ಟಿಡಿಎಸ್ ಸ್ಥಿರಾಸ್ತಿ ಖರೀದಿಸುವಾಗ ಕ್ಲಬ್ ಸದಸ್ಯತ್ವ, ಕಾರು ಪಾರ್ಕಿಂಗ್, ವಿದ್ಯುತ್ ಹಾಗೂ ನೀರು ಸರಬರಾಜು ಶುಲ್ಕದಂತಹ ಹೆಚ್ಚುವರಿ ವೆಚ್ಚವನ್ನು ಮಾಡಿದರೆ, ಅದನ್ನೂ ಸೇರಿಸಿ ಆಸ್ತಿ ಮೌಲ್ಯ ಲೆಕ್ಕ ಹಾಕಿ ಟಿಡಿಎಸ್ ಕಡಿತಗೊಳಿಸಬೇಕಾಗುತ್ತದೆ. 

ಆಧಾರ್ ಲಿಂಕ್ ಆಗದ ಪ್ಯಾನ್ ನಿಷ್ಕ್ರಿಯ ಆಧಾರ್ ಜತೆ ಲಿಂಕ್ ಆಗದ ಪ್ಯಾನ್ ಕಾರ್ಡ್‌ಗಳು ಅಸಿಂಧು ಆಗುತ್ತವೆ ಎಂದು ಈ ಹಿಂದೆ ಸರ್ಕಾರ  ಹೇಳಿತ್ತು. ಆದರೆ ಇನ್ನು ಮುಂದೆ ಅಸಿಂಧು ಬದಲು ನಿಷ್ಕ್ರಿಯವಾಗು ತ್ತವೆ. ಅಸಿಂಧು ಪ್ಯಾನ್ ಎಂದು ಘೋಷಣೆಯಾದ ವ್ಯಕ್ತಿಯ ಹಿಂದಿನ ಹಣಕಾಸು ವ್ಯವಹಾರಗಳನ್ನು ಉಳಿಸಿ ಕೊಳ್ಳುವ ಸಲುವಾಗಿ ಸರ್ಕಾರ ಬಜೆಟ್‌ನಲ್ಲಿ ಈ ಬದಲಾ ವಣೆ ತಂದಿದೆ. ನಿಷ್ಕ್ರಿಯ ಪ್ಯಾನ್ ಹೊಂದಿರುವ ತೆರಿಗೆದಾ ರನ ಮೇಲೆ ಯಾವ ರೀತಿಯ ಪರಿಣಾಮವಾಗಲಿದೆ ಎಂಬುದನ್ನು ಸರ್ಕಾರ ಹೇಳಿಲ್ಲ.

ಪೋಸ್ಟ್ ಆಫೀಸ್ ಬ್ಯಾಂಕ್ ಶುರು ಬಹು ನಿರೀಕ್ಷಿತ ಅಂಚೆ ಇಲಾಖೆಯ ಬ್ಯಾಂಕ್ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಲಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಹಣಕಾಸು ಸೇವೆಗಳನ್ನು ಬಲಗೊಳಿಸಲು ಉದ್ದೇಶಿಸಲಾಗಿದ್ದು, ಕನಿಷ್ಠ ಜಿಲ್ಲೆಗೊಂದು ಶಾಖೆ ಇರಲಿದೆ. ಉಳಿದ ಬ್ಯಾಂಕ್‌ಗಳು ನೀಡುವ ಎಲ್ಲಾ ಸೌಲಭ್ಯಗಳು ಪೋಸ್ಟ್ ಬ್ಯಾಂಕ್‌ನಲ್ಲಿ ಲಭ್ಯವಾಗಲಿದೆ. ಇದರ ಮೂಲಕವೇ ನರೇಗಾ ವೇತನ ಸಬ್ಸಿಡಿ ಹಾಗೂ ಪೆನ್ಸನ್ ವಿತರಿಸಲು ಸರ್ಕಾರ ಚಿಂತನೆ ನಡೆಸಿದೆ. ಎಸ್‌ಬಿಐ ಗೃಹ, ವಾಹನ ಸಾಲ ರಿಪೋ ಲಿಂಕ್ ಆರ್‌ಬಿಐನ ಗೃಹ ಹಾಗೂ ವಾಹನದ ಸಾಲದ ಮೇಲಿನ ಬಡ್ಡಿದರವನು ರಿಪೋ ದರಕ್ಕೆ ಹೊಂದಾಯಿಸುವ ಯೋಜನೆ ಭಾನುವಾರದಿಂದ ಜಾರಿಗೆ ಬರಲಿದೆ. ಈ ಯೋಜನೆ ಯಡಿ ಶೇ.8.05 ರಿಂದ ಬಡ್ಡಿದರಗಳು ಆರಂಭವಾಗಲಿದೆ.

ಮೂರನೇ ವ್ಯಕ್ತಿ ವಾಹನ ವಿಮೆ ತುಟ್ಟಿ ಇಂದಿನಿಂದ ಅನ್ವಯವಾಗುವಂತೆ ಮೂರನೇ ವ್ಯಕ್ತಿ ವಾಹನ ವಿಮೆಯಲ್ಲಿ ಭಾರೀ ಏರಿಕೆಯಾಗಿದ್ದು, ಕಾರು ಖರೀದಿ ಮಾಡುವವರು ಕನಿಷ್ಠ 24 ಸಾವಿರ ಹಾಗೂ  ದ್ವಿಚಕ್ರ ವಾಹನ ಖರೀದಿ ಮಾಡುವವರು ಕನಿಷ್ಠ 13 ಸಾವಿರ ರು. ವಿಮೆ ಪಾವತಿ ಸಬೇಕಾಗುತ್ತ