ನ್ಯೂಯಾರ್ಕ್: ಸಣ್ಣ ಮತ್ತು ಅತಿಸಣ್ಣ ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಪ್ರಧಾನಮಂತ್ರಿ ಕಿಸಾನ್ ಯೋಜನೆ ಆರಂಭಿಸಿರುವ ಕೇಂದ್ರ ಸರ್ಕಾರ, ಆ ಯೋಜನೆಯಡಿ ನಿಗದಿಪಡಿಸಿರುವ ವಾರ್ಷಿಕ 6000 ರು. ನಗದು ಮೊತ್ತವನ್ನು ಭವಿಷ್ಯದಲ್ಲಿ ಹೆಚ್ಚಳ ಮಾಡಬಹುದು ಎಂಬ ಸುಳಿವನ್ನು ಕೇಂದ್ರ ಸಚಿವ ಅರುಣ್ ಜೇಟ್ಲಿ ನೀಡಿದ್ದಾರೆ.

ಪ್ರಧಾನಿ ಕಿಸಾನ್ ಯೋಜನೆಯ ಮೊದಲ ವರ್ಷ ಇದು. ಸರ್ಕಾರದ ಸಂಪನ್ಮೂಲ ಹೆಚ್ಚಾದರೆ, ನೇರ ನಗದು ವರ್ಗಾವಣೆಯಡಿ ರೈತರಿಗೆ ನೀಡಲಾಗುವ ಮೊತ್ತವನ್ನು ಹೆಚ್ಚಳ ಮಾಡಬಹುದಾಗಿರುತ್ತದೆ ಎಂದು ಅವರು ತಿಳಿಸಿ ದ್ದಾರೆ. 

ರಾಜ್ಯ ಸರ್ಕಾರಗಳು ಬೇಕಿದ್ದರೆ, ಕೇಂದ್ರ ಸರ್ಕಾರ ನೀಡುವ ಮೊತ್ತದ ಮೇಲೆ ತಮ್ಮ ಸಂಪನ್ಮೂಲದಿಂದಲೂ ರೈತರಿಗೆ ಹಣ ವರ್ಗಾವಣೆ ಮಾಡಬಹುದು ಎಂದು ಹೇಳಿದ್ದಾರೆ.