Asianet Suvarna News Asianet Suvarna News

COVID-19 : ನಾಲ್ಕು ಬಾರಿ ಲಸಿಕೆ ಹಾಕಿಸಿಕೊಂಡ್ರೂ ಬಂತು ಕರೋನಾ!

ವಿವಿಧ ದೇಶಗಳಿಂದ ಸೇರಿ ಒಟ್ಟು ನಾಲ್ಕು ಕೋವಿಡ್-19 ಲಸಿಕೆ ಪಡೆದುಕೊಂಡಿದ್ದ ಮಹಿಳೆ
ಇಂದೋರ್ ವಿಮಾನನಿಲ್ದಾಣದ ಪರೀಕ್ಷೆಯ ವೇಳೆ ಮತ್ತೆ ಪಾಸಿಟಿವ್
ಪ್ರಸ್ತುತ ಆಸ್ಪತ್ರೆಗೆ ದಾಖಲಾಗಿರುವ 30 ವರ್ಷದ ಮಹಿಳೆ
 

Unheard of development in Madhya Pradesh a 30 year old woman who is vaccinated against Covid 19 Four times tested positive
Author
Bengaluru, First Published Dec 30, 2021, 5:22 PM IST

ಇಂದೋರ್ (ಡಿ. 30): ದೇಶದಾದ್ಯಂತ ಕೋವಿಡ್-19 (Covid 19) ಮೂರನೇ ಅಲೆಯ ಭೀತಿ ಇರುವ ನಡುವೆಯೇ, ಅಚ್ಚರಿಯ ಪ್ರಕರಣದಲ್ಲಿ ನಾಲ್ಕು ಬಾರಿ ಕೋವಿಡ್-19 ಲಸಿಕೆ ಪಡೆದುಕೊಂಡ ಮಹಿಳೆ ಮತ್ತೆ ಕರೋನಾ ಪಾಸಿಟಿವ್ ಆಗಿದ್ದಾರೆ. ವಿವಿಧ ದೇಶಗಳಲ್ಲಿ ನಾಲ್ಕು ಬಾರಿ ಕೋವಿಡ್-19 ಲಸಿಕೆಯನ್ನು ಮಹಿಳೆಯೊಬ್ಬರು ಪಡೆದುಕೊಂಡಿದ್ದರು. ಗುರುವಾರ ಇಂದೋರ್ ವಿಮಾನನಿಲ್ದಾಣದಲ್ಲಿ (Indore Airport) ಮತ್ತೊಮ್ಮೆ ಪರೀಕ್ಷೆ ನಡೆಸಿದಾಗ ಅವರಿಗೆ ಕೋವಿಡ್ ಪಾಸಿಟಿವ್ (positive for COVID-19 ) ಇರುವುದು ಪತ್ತೆಯಾಗಿದೆ. ಆಕೆಯಲ್ಲಿ ಯಾವುದೇ ಕರೋನಾ ಲಕ್ಷಣಗಳು ಮೇಲ್ನೋಟಕ್ಕೆ ಕಂಡಿಲ್ಲವಾದರೂ, ಪರೀಕ್ಷೆಯ ವೇಳೆ ಪಾಸಿಟಿವ್ ಆಗಿರುವ ಕಾರಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

"ಈಗಾಗಲೇ ವಿವಿಧ ದೇಶಗಳ ಪ್ರಯಾಣದ ವೇಳೆ ನಾಲ್ಕು ಬಾರಿ ಕೋವಿಡ್-19 ಲಸಿಕೆಯನ್ನು 30 ವರ್ಷದ ಮಹಿಳೆಯೊಬ್ಬರು ಹಾಕಿಸಿಕೊಂಡಿದ್ದಾರೆ. ಹಾಗಿದ್ದರೂ ಇಂದು ವಿಮಾನನಿಲ್ದಾಣದಲ್ಲಿ ನಡೆಸಿದ ಪರೀಕ್ಷೆಯ ವೇಳೆ ಕೋವಿಡ್ ಪಾಸಿಟಿವ್ ಆಗಿದ್ದಾರೆ. ಅವರು ಲಕ್ಷಣರಹಿತರಾಗಿದ್ದಾರೆ. ಒಂದು ದಿನದ ಮೊದಲು ನಡೆಸಿದ ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ಎಂದು ಫಲಿತಾಂಶ ಬಂದಿತ್ತು' ಎಂದು ಇಂದೋರ್ ನಗರದ ಮುಖ್ಯ ವೈದ್ಯಕೀಯ ಹಾಗೂ ಆರೋಗ್ಯ ಅಧಿಕಾರಿ (ಸಿಎಂಎಚ್ಓ) (Indore Chief Medical and Health Officer) ಡಾ. ಭೂರೆ ಸಿಂಗ್ ಸೆಟಿಯಾ (Dr Bhure Singh Setia )ಹೇಳಿದ್ದಾರೆ.

12 ದಿನಗಳ ಹಿಂದೆ ಇಂದೋರ್ ಗೆ ಬಂದಿದ್ದ ಮಹಿಳೆ, ದುಬೈಗೆ (Dubai) ವಾಪಸಾಗುವ ನಿಟ್ಟಿನಲ್ಲಿ ಗುರುವಾರ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಅವರಿಗೆ ಕೋವಿಡ್-19 ಪಾಸಿಟಿವ್ ಇರುವುದು ಪತ್ತೆಯಾಗಿದೆ. ದೇಶದಲ್ಲಿ ಒಮಿಕ್ರಾನ್ ಆತಂಕ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಎಲ್ಲಾ ವಿಮಾನ ನಿಲ್ದಾಣಗಳಲ್ಲೂ ಕ್ಷಿಪ್ರ ಆರ್ ಟಿ-ಪಿಸಿಆರ್ ಟೆಸ್ಟ್ ಗಳನ್ನು(RT-PCR) ಮಾಡಲಾಗುತ್ತಿದೆ. ಇದರಲ್ಲಿ ಇವರಲ್ಲಿ ಸೋಂಕು ಇರುವುದು ಪತ್ತೆಯಾಗಿದ್ದು, ಆಕೆಗೆ ವಿಮಾನ ಏರಲು ಅವಕಾಶ ನಿರಾಕರಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಇಂದೋರ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಆ ಬಳಿಕ ನಡೆದ ವಿಚಾರಣೆಯ ವೇಳೆ ಜನವರಿಯಿಂದ ಆಗಸ್ಟ್ ಮಧ್ಯೆ ವಿವಿಧ ದೇಶಗಳ ಪ್ರಯಾಣದ ವೇಳೆ ಒಟ್ಟಾರೆ 4 ಬಾರಿ ಕೋವಿಡ್-19 ಲಸಿಕೆ (Vaccinated 4 Times )ತೆಗೆದುಕೊಂಡಿದ್ದಾಗಿ ಮಹಿಳೆ ಹೇಳಿದ್ದಾರೆ.

Sourav Ganguly Health Update: ಗಂಗೂಲಿಗೆ ಕಾಕ್‌ಟೇಲ್‌ ಥೆರಪಿ ಚಿಕಿತ್ಸೆ
ಮಧ್ಯಪ್ರದೇಶದಲ್ಲಿ ಈವರೆಗೂ 9 ಒಮಿಕ್ರಾನ್ (Omicron) ಪ್ರಕರಣಗಳು ಕಂಡು ಬಂದಿದೆ. ಶೀಘ್ರವಾಗಿ ಹರಡಬಲ್ಲ ಒಮಿಕ್ರಾನ್ ವೈರಸ್ ಅದರಲ್ಲೂ ವಿದೇಶದಿಂದ ಆಗಮಿಸುವ ಪ್ರಯಾಣಿಕರಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ತಪಾಸಣೆಗಳನ್ನು ಮಾಡಲಾಗುತ್ತಿದೆ. ಈ ಮಹಿಳೆಯಲ್ಲಿ ಯಾವುದೇ ಲಕ್ಷಣಗಳು ಇಲ್ಲದೇ ಇರುವ ಕಾರಣ ಇದು ಒಮಿಕ್ರಾನ್ ವೈರಸ್ ಆಗಿರಬಹುದು ಎಂದು ಶಂಕಿಸಲಾಗಿದೆ. ಇನ್ನು ಭಾರತದಲ್ಲಿ ಕೋವಿಡ್-19 ಪ್ರಕರಣವು ಹೊಸ ವೈರಸ್ ನ ಬೆನ್ನಲ್ಲಿಯೇ ಹೆಚ್ಚಾಗುವ ಸಾಧ್ಯತೆಗಳು ದಟ್ಟವಾಗಿ ಕಾಣುತ್ತಿದೆ. ಹಬ್ಬದ ಋತುವಿನಲ್ಲಿ ಆತಂಕಕಾರಿ ಮಟ್ಟದಲ್ಲಿ ವೈರಸ್ ಹರಡಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಗುರುವಾರ ಒಂದೇ ದಿನ ಒಮಿಕ್ರಾನ್ ವೈರಸ್ ನ 116 ಪ್ರಕರಣಗಳು ಬೆಳಕಿಗೆ ಬಂದಿದ್ದು, ದೇಶದಲ್ಲಿ ಒಟ್ಟು 946 ಪ್ರಕರಣಗಳಾಗಿವೆ. ಹೊಸ ವೈರಸ್ ನಿಂದಾಗ 241 ರೋಗಿಗಳು ಗುಣಮುಖರಾಗಿದ್ದಾರೆ.

ಕೋವಿಡ್ ಸ್ಫೋಟದಿಂದ 3ನೇ ಅಲೆ ಖಚಿತ, ಫ್ಯಾನ್ಸ್‌ಗೆ ಸಂದೇಶ ರವಾನಿಸಿದ ರಚಿತಾ, ಡಿ.30ರ Top 10 News!
ಭಾರತವು 13,154 ಹೊಸ ಕೋವಿಡ್-19 ಪ್ರಕರಣಗಳ ಬೃಹತ್ ಏರಿಕೆಗೆ ಸಾಕ್ಷಿಯಾಗಿದೆ, ಇದು ಕಳೆದ ಏಳುವಾರಗಳಲ್ಲಿಯೇ ಅತ್ಯಧಿಕ ಪ್ರಮಾಣವಾಗಿದೆ. ಹಲವಾರು ಪ್ರದೇಶಗಳಲ್ಲಿ ದೈನಂದಿನ ಸೋಂಕುಗಳ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಕಾರಣ ದೇಶದಲ್ಲಿ ಆತಂಕ ಸೃಷ್ಟಿಯಾಗಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 3,900 ಹೊಸ ಸೋಂಕುಗಳು ವರದಿಯಾಗಿದ್ದು, ಕೇರಳದಲ್ಲಿ 2,846 ಪ್ರಕರಣಗಳು, ಪಶ್ಚಿಮ ಬಂಗಾಳ (1,089), ಮತ್ತು ದೆಹಲಿ (923) ಪ್ರಕರಣಗಳು ವರದಿಯಾಗಿವೆ. ಭಾರತದಲ್ಲಿ ಮಂಗಳವಾರ 9,155 ಮತ್ತು ಸೋಮವಾರ 6,139 ಹೊಸ ಪ್ರಕರಣಗಳು ವರದಿಯಾಗಿವೆ.

Follow Us:
Download App:
  • android
  • ios