ಭೂಗತ ಪಾತಕಿ ಬನ್ನಂಜೆ ರಾಜ ಉಡುಪಿಗೆ  ತಾಯಿಯ ಅಂತ್ಯ ಸಂಸ್ಕಾರಕ್ಕೆ ಆಗಮಿಸಲಿದ್ದಾರೆ  ಹಿಂಡಲಗಾ ಜೈಲಿನಿಂದ ಉಡುಪಿಗೆ ಪೊಲೀಸರ ಸುಪರ್ದಿಯಲ್ಲಿ ಆಗಮಿಸಲಿರುವ ರಾಜ 

ಉಡುಪಿ (ಆ. 27): ಭೂಗತ ಪಾತಕಿ ಬನ್ನಂಜೆ ರಾಜ ತಾಯಿಯ ಅಂತ್ಯಸಂಸ್ಕಾರಕ್ಕೆಂದು ಉಡುಪಿಗೆ ಆಗಮಿಸಲಿದ್ದಾರೆ. 

ಬನ್ನಂಜೆ ರಾಜನ ತಾಯಿ ವಿಲಾಸಿನಿ‌ ಶೆಟ್ಟಿಗಾರ್(78) ಕಾಲು ಜಾರಿ ಬಿದ್ದು ಶನಿವಾರ ಸಾವನ್ನಪ್ಪಿದ್ದಾರೆ. ಮಲ್ಪೆಯಲ್ಲಿ ನಡೆಯಲಿರುವ ಅಂತ್ಯಸಂಸ್ಕಾರದಲ್ಲಿ ಬನ್ನಂಜೆ ರಾಜ ಭಾಗವಹಿಸಲಿದ್ದಾರೆ. 

ಉಡುಪಿ ಜಿಲ್ಲಾ ಮತ್ತು‌ ಸತ್ರ ನ್ಯಾಯಾಲಯದಿಂದ‌‌ ವಿಶೇಷ ಅನುಮತಿ ಪಡೆದ ಬನ್ನಂಜೆ ರಾಜ ಬೆಳಗಾವಿ ಹಿಂಡೆಲಗ ಜೈಲಿಂದ ಉಡುಪಿ ಬಂದಿಳಿದಿದ್ದಾರೆ. ಪೊಲೀಸ್ ಸುಪರ್ಧಿಯಲ್ಲಿ ಅಂತ್ಯಸಂಸ್ಕಾರಕ್ಕೆ ತೆರಳಲಿದ್ದಾರೆ. 

ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ಪರಿಣಾಮ ವಿಲಾಸಿನಿಯವರ ತಲೆಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದೆ ಎನ್ನಲಾಗಿದೆ. ಕೂಡಲೇ ಅವರನ್ನು ಮಣಿಪಾಲದ ಕೆಎಂಸಿಗೆ ದಾಖಲಿಸಲಾಗಿತ್ತು. ಆದರೆ ಅಷ್ಟೊತ್ತಿಗಾಗಲೇ ಪ್ರಾಣಪಕ್ಷಿ ಹಾರಿಹೋಗಿತ್ತು.