ಲಖನೌ[ಆ.24]: ಶಾಲೆಯಲ್ಲಿ ಮಕ್ಕಳು ಹಸಿದುಕೊಂಡು ಇರಬಾರದು. ಅವರಿಗೆ ಪೌಷ್ಟಿಕ ಆಹಾರ ನೀಡಬೇಕು ಎಂಬ ಕಾರಣಕ್ಕೆ ಸರ್ಕಾರ ಮಧ್ಯಾಹ್ನ ಬಿಸಿಯೂಟ ಯೋಜನೆ ಆರಂಭಿಸಿದೆ. ಆದರೆ, ಉತ್ತರ ಪ್ರದೇಶದ ಮಿರ್ಜಾಪುರ್‌ ಜಿಲ್ಲೆಯ ಹಿನೌತಾ ಎಂಬ ಗ್ರಾಮದಲ್ಲಿ ಮಕ್ಕಳಿಗೆ ಚಪಾತಿ ಜೊತೆ ಪಲ್ಯದ ಬದಲು ಉಪ್ಪನ್ನು ಬಡಿಸಲಾಗಿದೆ.

ಮಕ್ಕಳು ಚಪಾತಿಯನ್ನು ಉಪ್ಪಿನೊಂದಿಗೆ ತಿನ್ನುತ್ತಿರುವ ವಿಡಿಯೋ ವೈರಲ್‌ ಆಗಿದ್ದು, ಶಾಲಾ ಆಡಳಿತದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಇದೇ ವೇಳೆ ಎಂದು ಮಿರ್ಜಾಪುರ್‌ ಜಿಲ್ಲಾಧಿಕಾರಿ ಅನುರಾಗ್‌ ಪಟೇಲ್‌, ಶಿಕ್ಷಕ ಹಾಗೂ ಮೇಲ್ವಿಚಾರಕರ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಶಿಕ್ಷಕನನ್ನು ಅಮಾನತು ಮಾಡಲಾಗಿದೆ ಮತ್ತು ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.