ಯುಗಾದಿ ಹಬ್ಬದ ದಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಚಿವೆ ಉಮಾಶ್ರೀ ಸರಸ್ವತಿ ರೂಪ ತಾಳಿದರು. ಖ್ಯಾತ ರಂಗಭೂಮಿ ಕಲಾವಿದ ಸರಿಗಮ ವಿಜಿ ನಿರ್ದೆಶನದ ‘ಸಂಸಾರದಲ್ಲಿ ಸರಿಗಮ’ ನಾಟಕದಲ್ಲಿ ಸಚಿವೆ ಉಮಾಶ್ರೀ ಸರಸ್ವತಿ ಪಾತ್ರ ನಿರ್ವಹಿಸಿದರು.
ಬೆಂಗಳೂರು(ಮಾ.30): ಯುಗಾದಿ ಹಬ್ಬದ ದಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಚಿವೆ ಉಮಾಶ್ರೀ ಸರಸ್ವತಿ ರೂಪ ತಾಳಿದರು. ಖ್ಯಾತ ರಂಗಭೂಮಿ ಕಲಾವಿದ ಸರಿಗಮ ವಿಜಿ ನಿರ್ದೆಶನದ ‘ಸಂಸಾರದಲ್ಲಿ ಸರಿಗಮ’ ನಾಟಕದಲ್ಲಿ ಸಚಿವೆ ಉಮಾಶ್ರೀ ಸರಸ್ವತಿ ಪಾತ್ರ ನಿರ್ವಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಸಾರದಲ್ಲಿ ಸರಿಗಮ ನಾಟಕದ 1391 ನೇ ಪ್ರದರ್ಶನಕ್ಕೆ ಚಾಲನೆ ನೀಡಿ, ಕೆಲ ಹೊತ್ತು ಮುಖ್ಯಮಂತ್ರಿಗಳು ತನ್ನ ಸಂಪುಟ ಸಹದ್ಯೋಗಿಯ ಸರಸ್ವತಿ ಪಾತ್ರ ವೀಕ್ಷಿಸಿದರು. ಬಳಿಕ ಮಾತನಾಡಿದ ಸಿ.ಎಂ ಈ ಹಿಂದೆಯೆ ಈ ನಾಟಕ ವೀಕ್ಷಿಸಿದ್ದೆ. ಸಿನಿಮಾ ಅಭಿನಯ ಸುಲಭ. ಆದರೆ ನಾಟಕದಲ್ಲಿ ಅಭಿನಯ ಕಷ್ಟ ಎಂದು ಅಭಿಪ್ರಾಯ ಪಟ್ಟರು.
ಅಲ್ಲದೇ ಕಲಾವಿದರಾದವರು ಪ್ರಧಾನಿಯೆ ಆದರೂ ನಟನೆ ಬಿಡಲ್ಲ. ಅದಕ್ಕೆ ಉಮಾಶ್ರೀಯೆ ಸಾಕ್ಷಿ ಎನ್ನುವ ಮೂಲಕ, ಉಮಾಶ್ರೀ ಅವರಿಗಿರುವ ರಂಗಭೂಮಿ ಮೇಲಿನ ಪ್ರೀತಿಗೆ ಸಿ.ಎಂ ಬೆಂಬಲ ವ್ಯಕ್ತಪಡಿಸಿದರು.
