ಬಳ್ಳಾರಿ: ಮಹಿಳೆಯರು ತಮಗಾದ ಕಿರುಕುಳದ ಅನುಭವ ಅಭಿವ್ಯಕ್ತಗೊಳಿಸುವ ಉದ್ದೇಶದಿಂದ ಶುರುವಾದ ‘ಮೀ ಟೂ’ ಅಭಿಯಾನ ಒಳ್ಳೆಯದ್ದೇ. 

ಆದರೆ, ದುರುಪಯೋಗ ವಾಗಬಾರದು ಎಂದು ರಂಗಭೂಮಿ ಹಿರಿಯ ಕಲಾವಿದೆ, ಮಾಜಿ ಸಚಿವೆ ಉಮಾಶ್ರೀ  ಅಭಿ ಪ್ರಾಯಪಟ್ಟಿದ್ದಾರೆ. 

‘ಕನ್ನಡಪ್ರಭ’ ಜತೆ ಮಾತನಾಡಿ, ಅರ್ಜುನ್ ಸರ್ಜಾ ಹಾಗೂ ಶ್ರುತಿ ಹರಿಹರನ್ ‘ಮೀ ಟೂ’ ಪ್ರಕರಣ ನ್ಯಾಯಾಲಯ ಮೆಟ್ಟಿಲು ಹತ್ತಿರುವುದರಿಂದ ಈ ಕುರಿತು ಪ್ರತಿಕ್ರಿಯಿಸಲಾರೆ ಎಂದರು.