ನೀರವ್‌, ಮಲ್ಯ ಗಡಿಪಾರಿಗೆ ಬ್ರಿಟನ್‌ ಸಜ್ಜು?

UK may link extradition of Nirav Modi, Vijay Mallya with illegal migrant pact
Highlights

ಬ್ರಿಟನ್‌ನಲ್ಲಿ ನೆಲೆಸಿರುವ 75 ಸಾವಿರ ಅಕ್ರಮ ಭಾರತೀಯರನ್ನು ಭಾರತಕ್ಕೆ ಗಡೀಪಾರು ಮಾಡುವ ‘ಅಕ್ರಮ ವಲಸಿಗರ ಕಾಯ್ದೆ’ಗೆ ಸಹಿ ಹಾಕಲು ಭಾರತ ಹಾಗೂ ಬ್ರಿಟನ್‌ ಮುಂದಾಗಿವೆ. ಈ ಒಪ್ಪಂದದಲ್ಲಿ ಬ್ರಿಟನ್‌ನಲ್ಲಿ ನೆಲೆಸಿರುವ ಭಾರತೀಯ ಉದ್ಯಮಿ ವಿಜಯ ಮಲ್ಯ ಅವರನ್ನು ಹಾಗೂ ಇನ್ನೊಬ್ಬ ಉದ್ಯಮಿ ನೀರವ್‌ ಮೋದಿ ಅವರನ್ನೂ ಸಾಧ್ಯತೆ ಇದೆ.
 

ನವದೆಹಲಿ (ಜೂ. 13):  ಬ್ರಿಟನ್‌ನಲ್ಲಿ ನೆಲೆಸಿರುವ 75 ಸಾವಿರ ಅಕ್ರಮ ಭಾರತೀಯರನ್ನು ಭಾರತಕ್ಕೆ ಗಡೀಪಾರು ಮಾಡುವ ‘ಅಕ್ರಮ ವಲಸಿಗರ ಕಾಯ್ದೆ’ಗೆ ಸಹಿ ಹಾಕಲು ಭಾರತ ಹಾಗೂ ಬ್ರಿಟನ್‌ ಮುಂದಾಗಿವೆ. ಈ ಒಪ್ಪಂದದಲ್ಲಿ ಬ್ರಿಟನ್‌ನಲ್ಲಿ ನೆಲೆಸಿರುವ ಭಾರತೀಯ ಉದ್ಯಮಿ ವಿಜಯ ಮಲ್ಯ ಅವರನ್ನು ಹಾಗೂ ಇನ್ನೊಬ್ಬ ಉದ್ಯಮಿ ನೀರವ್‌ ಮೋದಿ ಅವರನ್ನೂ ಸಾಧ್ಯತೆ ಇದೆ.

ಸೋಮವಾರ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್‌ ರಿಜಿಜು ಹಾಗೂ ಬ್ರಿಟನ್‌ನ ಭಯೋತ್ಪಾದಕ ನಿಗ್ರಹ ಖಾತೆ ಸಚಿವೆ ಬ್ಯಾರನೆಸ್‌ ವಿಲಿಯಮ್ಸ್‌ ಅವರು ದಿಲ್ಲಿಯಲ್ಲಿ ಮಾತುಕತೆ ನಡೆÜಸಿದರು. ಈ ವೇಳೆ ಈ ವಿಷಯದ ಚರ್ಚೆ ನಡೆಯಿತು.

ಅಕ್ರಮ ವಲಸಿಗರು ಎಂದು ಗೊತ್ತಾದರೆ ಅಂಥವರನ್ನು, ಪತ್ತೆ ಮಾಡಿದ 1 ತಿಂಗಳೊಳಗೆ ಗಡೀಪಾರು ಮಾಡುವ ಅಂಶವು ಒಪ್ಪಂದದಲ್ಲಿದೆ. ಆದರೆ ಒಮ್ಮೆಲೆ 75 ಸಾವಿರ ಜನರನ್ನು ಗಡೀಪಾರು ಮಾಡಿದರೆ ಸಮಸ್ಯೆಯಾಗಬಹುದು ಎಂದು ಈ ಒಪ್ಪಂದದ ಕೆಲವು ಅಂಶಗಳ ಬಗ್ಗೆ ಭಾರತ ಸರ್ಕಾರ ತಕರಾರು ಎತ್ತಿದ್ದು, ಈ ಬಗ್ಗೆ ಕೂಡ ಚರ್ಚೆ ನಡೆದಿದೆ. ಇದೇ ವೇಳೆ ನೀರವ್‌ ಮೋದಿ ಹಾಗೂ ಮಲ್ಯ ಪ್ರಕರಣಗಳನ್ನೂ ಇದೇ ಒಪ್ಪಂದದಲ್ಲಿ ಸೇರಿಸುವ ಬಗ್ಗೆ ಚರ್ಚೆ ನಡೆಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. 

loader