ದಕ್ಷ ಅಧಿಕಾರಿ ಮೇಜಿನ ಮೇಲೆ ಮೊಬೈಲ್ ಇಟ್ಟು ಹೊರನಡೆದಿದ್ದು ಯಾಕೆ?

Udupi: Hebri SI Mahabala Shetty resigns, blames senior officials
Highlights

ಕೆಲ ದಿನಗಳಿಂದ ಮರೆಯಾಗಿದ್ದ ಪೊಲೀಸ್ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳ ಕಿರುಕುಳ ವಿಚಾರ ಮತ್ತೆ ಸುದ್ದಿ ಮಾಡುತ್ತಿದೆ. ಈ ಬಾರಿ ಸುದ್ದಿ ಉಡುಪಿಯಿಂದ ಬಂದಿದೆ.

ಉಡುಪಿ[ಜು.6] ಜಿಲ್ಲೆಯ ಹೆಬ್ರಿ  ಎಸ್ ಐಗೆ ಹಿರಿಯ ಅಧಿಕಾರಿಗಳಿಂದ ಕಿರುಕುಳ  ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ಮನನೊಂದಿರುವ ಎಸ್ ಐ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. 

ಸಿವಿಲ್ ವ್ಯಾಜ್ಯವೊಂದಕ್ಕೆ ಸಂಬಂಧಿಸಿ ಎಸ್ ಐ ಮಹಾಬಲ ಶೆಟ್ಟಿ ಅವರನ್ನು ಹಿರಿಯ ಅಧಿಕಾರಿಗಳು ತರಾಟೆಗೆ ತೆಗೆದು ಕೊಂಡಿದ್ದರು. ಸರಕಾರ ನೀಡಿದ ಮೊಬೖಲ್ ನ್ನು ಮೇಜಿನ ಮೇಲಿಟ್ಟು ಶೆಟ್ಟಿ ಅವರು ಹೊರನಡೆದಿದ್ದಾರೆ.

ಹಿರಿಯ ಅಧಿಕಾರಿಗಳು ಮನವೊಲಿಕೆಗೆ ಯತ್ನ ಮಾಡಿದ್ದಾರೆ. ಎಸ್ ಐ ಮಹಾಬಲ ಶೆಟ್ಟಿಯವರು ರಾಜೀನಾಮೆ ನೀಡಿದ್ದಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಲು ಪೊಲೀಸ್ ಇಲಾಖೆ ಅಧಿಕಾರಿಗಳು ನಿರಾಕರಿಸಿದ್ದಾರೆ.

loader