Asianet Suvarna News Asianet Suvarna News

ಸಂಸ್ಥೆಯ ವೈಫಲ್ಯಕ್ಕೆ ಉಬರ್ ಸಿಇಒ ಕ್ಷಮೆಯಾಚನೆ

ಕೆಲಸದಲ್ಲಿ ವೇಳೆ ತಾರತಮ್ಯ ಮಾಡುತ್ತಿದ್ದರು ಹಾಗೂ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಉಬರ್ ಸಂಸ್ಥೆಯ ಮಾಜಿ ಮಹಿಳಾ ಉದ್ಯೋಗಿಯೊಬ್ಬರು ಆರೋಪಿಸಿದ ಹಿನ್ನೆಲೆಯಲ್ಲಿ ಸಂಸ್ಥೆಯ ಸಿಇಓ ಟ್ರಾವಿಸ್ ಕಲಾನಿಕ್ ಕ್ಷಮೆಯಾಚಿಸಿದ್ದಾರೆ.

Uber CEO With Tears in His Eyes  Apologises for Company Culture

ನವದೆಹಲಿ (ಫೆ.22): ಕೆಲಸದಲ್ಲಿ ವೇಳೆ ತಾರತಮ್ಯ ಮಾಡುತ್ತಿದ್ದರು ಹಾಗೂ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಉಬರ್ ಸಂಸ್ಥೆಯ ಮಾಜಿ ಮಹಿಳಾ ಉದ್ಯೋಗಿಯೊಬ್ಬರು ಆರೋಪಿಸಿದ ಹಿನ್ನೆಲೆಯಲ್ಲಿ ಸಂಸ್ಥೆಯ ಸಿಇಓ ಟ್ರಾವಿಸ್ ಕಲಾನಿಕ್ ಕ್ಷಮೆಯಾಚಿಸಿದ್ದಾರೆ.

ಕಂಪನಿ ಉದ್ಯೋಗಿಗಳಲ್ಲಿರುವ ವೈವಿಧ್ಯತೆಯ ಕೊರತೆ, ಸಿಬ್ಬಂದಿಗಳ ದೂರುಗಳಿಗೆ ಸರಿಯಾಗಿ ಸ್ಪಂದಿಸದೇ ಇರುವುದಕ್ಕೆ, ಸಂಸ್ಥೆಯ ಧ್ಯೇಯೋಧ್ಯೇಶ ವಿಫಲವಾಗಿರುವುದಕ್ಕೆ ಕಂಪನಿ ಸಿಇಓ ಕಣ್ಣಲ್ಲಿ ನೀರು ತುಂಬಿಕೊಂಡು ವಿಷಾದ ವ್ಯಕ್ತಪಡಿಸಿದ್ದಾರೆ.

ಬದಲಾವಣೆ ಒಮ್ಮೆಗೆ ಆಗುವುದಿಲ್ಲ. ಎಲ್ಲಿ ತಪ್ಪಾಗಿದೆ ಎಂದು ತಿಳಿದು ಸರಿಪಡಿಸುವುದಕ್ಕೆ ಸಮಯಾವಕಾಶ ಹಿಡಿಯುತ್ತದೆ. ಉಬರ್ ಅನ್ನು ಉತ್ತಮಪಡಿಸುವುದರ ಜೊತೆಗೆ ಉದ್ಯಮದಲ್ಲಿ ಮಹಿಳಾ ಅಭಿವೃದ್ಧಿಗೂ ಶ್ರಮಿಸಲಿದ್ದೇವೆ ಎಂದು ಟ್ರಾವಿಸ್ ಕಲಾನಿಕ್ ಹೇಳಿದ್ದಾರೆ.  

Follow Us:
Download App:
  • android
  • ios