ಹೊಸ ವರ್ಷದಿಂದ ಯುಎಇ ಪ್ರವಾಸಿಗರಿಗೆ ಅಲ್ಲಿನ ಪ್ರವಾಸ ಶೇ.5-7ರಷ್ಟು ದುಬಾರಿ ಎನಿಸಲಿದೆ. ಆರ್ಥಿಕತೆ ದುರ್ಬಲಗೊಳ್ಳುತ್ತಿರುವುದರಿಂದ ಯುಎಇ 2018, ಜ.1ರಿಂದ ಶೇ.5ರಷ್ಟು ವ್ಯಾಟ್ ವಿಧಿಸಲಿದೆ.​

ನವದೆಹಲಿ (ಡಿ.28): ಗಲ್ಫ್ ರಾಷ್ಟ್ರಗಳಿಗೆ ಭಾರತದಿಂದ ಸಾಕಷ್ಟು ಮಂದಿ ಪ್ರವಾಸ ಹಾಗೂ ಉದ್ಯೋಗದ ಉದ್ದೇಶದಿಂದ ಹೋಗುತ್ತಾರೆ. ಆದರೆ ಹೊಸ ವರ್ಷದಿಂದ ಯುಎಇ ಪ್ರವಾಸಿಗರಿಗೆ ಅಲ್ಲಿನ ಪ್ರವಾಸ ಶೇ.5-7ರಷ್ಟು ದುಬಾರಿ ಎನಿಸಲಿದೆ. ಆರ್ಥಿಕತೆ ದುರ್ಬಲಗೊಳ್ಳುತ್ತಿರುವುದರಿಂದ ಯುಎಇ 2018, ಜ.1ರಿಂದ ಶೇ.5ರಷ್ಟು ವ್ಯಾಟ್ ವಿಧಿಸಲಿದೆ.

ಬಹುತೇಕ ಸರಕುಗಳು ಮತ್ತು ಹೋಟೆಲ್‌ಗಳು, ಪ್ರವಾಸಿ ತಾಣ ವೀಕ್ಷಣೆ ಹಾಗೂ ಬಾಡಿಗೆ ಕಾರುಗಳು ಸೇರಿದಂತೆ ವಿವಿಧ ಸೇವೆಗಳಿಗೆ ವ್ಯಾಟ್ ಅನ್ವಯವಾಗಲಿದೆ. ದುಬೈ (ಯುಎಇ) ಭಾರತೀಯರು ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸ ಕೈಗೊಳ್ಳುವ ದೇಶವಾಗಿದೆ.