500 ರು. ಲಂಚ ಪಡೆದಿದ್ದಕ್ಕೆ ಪೊಲೀಸ್ ಅಧಿಕಾರಿಗೆ 2 ವರ್ಷ ಜೈಲು

First Published 2, Feb 2018, 8:58 AM IST
Two year jail for police officer in Graft case
Highlights

ಅಡಕೆ ಕದ್ದರೂ ಕಳ್ಳ, ಆನೆ ಕದ್ದರೂ ಕಳ್ಳ ಎಂಬ ಮಾತೇ ಇದೆ. ಲಂಚಕ್ಕೂ ಈ ಮಾತು ಅನ್ವಯ ಆಗುತ್ತೆ. ಏಕೆಂದರೆ ಕೇರಳದಲ್ಲಿ ಬೈಕ್ ಸವಾರನೊಬ್ಬನಿಂದ 500ರು. ಲಂಚ ಪಡೆದ ಕಾರಣಕ್ಕೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ಕೊಚ್ಚಿಯ ಕೋರ್ಟ್‌ವೊಂದು ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 25 ಸಾವಿರ ರು. ದಂಡ ವಿಧಿಸಿದೆ.

ಬೆಂಗಳೂರು : ಅಡಕೆ ಕದ್ದರೂ ಕಳ್ಳ, ಆನೆ ಕದ್ದರೂ ಕಳ್ಳ ಎಂಬ ಮಾತೇ ಇದೆ. ಲಂಚಕ್ಕೂ ಈ ಮಾತು ಅನ್ವಯ ಆಗುತ್ತೆ. ಏಕೆಂದರೆ ಕೇರಳದಲ್ಲಿ ಬೈಕ್ ಸವಾರನೊಬ್ಬನಿಂದ 500ರು. ಲಂಚ ಪಡೆದ ಕಾರಣಕ್ಕೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ಕೊಚ್ಚಿಯ ಕೋರ್ಟ್‌ವೊಂದು ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 25 ಸಾವಿರ ರು. ದಂಡ ವಿಧಿಸಿದೆ.

ಅಂಥೋನಿ ಎಂಬಾತ 2010ರಲ್ಲಿ ನಡೆದ ಸಣ್ಣ ಅಪಘಾತಕ್ಕೆ ಬೈಕ್ ಸವಾರನಿಂದ 1000 ರು. ಲಂಚ ಕೇಳಿದ್ದ. ಬಳಿಕ ಚೌಕಾಸಿ ಮಾಡಿ 500 ರು.ಗೆ ಬೈಕ್ ಬಿಡಲು ಒಪ್ಪಿದ್ದ. ಆಗಿನ ತಪ್ಪಿಗೆ ಪೊಲೀಸ್ ಅಧಿಕಾರಿ ಈಗ ಶಿಕ್ಷೆ ಅನುಭವಿಸುವಂತಾಗಿದೆ.

loader