Asianet Suvarna News Asianet Suvarna News

2 ವಿವಿಗಳಿಗೆ ಅಂಬೇಡ್ಕರ್‌, ಬಸವಣ್ಣ ಹೆಸರು

ಮಹಿಳಾ ವಿವಿ ಜ್ಞಾನ ಶಕ್ತಿ ಆವರಣದಲ್ಲಿ ಆಯೋಜಿಸಿದ್ದ ಮಹಿಳಾ ವಿವಿಗೆ ಅಕ್ಕಮಹಾದೇವಿ ಹೆಸರು ನಾಮಕರಣ, ವಿವಿಧ ಮಹಿಳಾ ಸಾಧಕಿಯರ ಪುತ್ಥಳಿಗಳ ಶಿಲ್ಪೋದ್ಯಾನ ಉದ್ಘಾಟನೆ ಹಾಗೂ ಮಹಿಳೆಯರ ಶಿಕ್ಷಣ, ಕೌಶಲಾಭಿವೃದ್ಧಿ ಹಾಗೂ ಜಾಗೃತಿ ಕಾರ್ಯಕ್ರಮ ಮತ್ತು ಅಕ್ಕಮಹಾದೇವಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

Two Universities to be named after Ambedkar and Basavanna

ವಿಜಯಪುರ : ಗುಲಬರ್ಗಾ ಕೇಂದ್ರೀಯ ವಿಶ್ವ ವಿದ್ಯಾಲಯಕ್ಕೆ ಡಾ. ಬಿ.ಆರ್‌. ಅಂಬೇಡ್ಕರ್‌ ಹಾಗೂ ಗುಲಬರ್ಗಾ ವಿಶ್ವ ವಿದ್ಯಾಲಯಕ್ಕೆ ಬಸವಣ್ಣನವರ ಹೆಸರಿಡಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಭಾನುವಾರ ನಗರ ಹೊರ ವಲಯದ ಮಹಿಳಾ ವಿವಿ ಜ್ಞಾನ ಶಕ್ತಿ ಆವರಣದಲ್ಲಿ ಆಯೋಜಿಸಿದ್ದ ಮಹಿಳಾ ವಿವಿಗೆ ಅಕ್ಕಮಹಾದೇವಿ ಹೆಸರು ನಾಮಕರಣ, ವಿವಿಧ ಮಹಿಳಾ ಸಾಧಕಿಯರ ಪುತ್ಥಳಿಗಳ ಶಿಲ್ಪೋದ್ಯಾನ ಉದ್ಘಾಟನೆ ಹಾಗೂ ಮಹಿಳೆಯರ ಶಿಕ್ಷಣ, ಕೌಶಲಾಭಿವೃದ್ಧಿ ಹಾಗೂ ಜಾಗೃತಿ ಕಾರ್ಯಕ್ರಮ ಮತ್ತು ಅಕ್ಕಮಹಾದೇವಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಗುಲಬರ್ಗಾ ಕೇಂದ್ರೀಯ ವಿಶ್ವ ವಿದ್ಯಾಲಯಕ್ಕೆ ಡಾ.ಅಂಬೇಡ್ಕರ್‌ ಹೆಸರಿಡಲು ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಈವರೆಗೆ ಈ ಬಗ್ಗೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿಲ್ಲ. ಕೇಂದ್ರದಿಂದ ಅನುಮತಿ ದೊರೆತ ನಾಮಕರಣ ಮಾಡಲಾಗುವುದು. ಗುಲಬರ್ಗಾ ವಿವಿಗೆ ಬಸವಣ್ಣನವರ ಹೆಸರಿಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಪರಿಸರ ವಿವಿ ಪರಿಶೀಲನೆಯಲ್ಲಿ: ಗದಗದಲ್ಲಿ ಪರಿಸರ ವಿಶ್ವ ವಿವಿ ಸ್ಥಾಪನೆಗೆ ಪರಿಶೀಲನೆ ನಡೆಸಲಾ ಗುವುದು. ಈ ಭಾಗದಲ್ಲಿ ಪರಿಸರ ವಿವಿ ಸ್ಥಾಪನೆಯಾ ಗಬೇಕೆಂಬುದು ಗದಗ ತೋಂಟದಾರ್ಯ ಸಿದ್ಧಲಿಂಗ ಶ್ರೀ ಹಾಗೂ ಸಾರ್ವಜನಿಕರ ಬೇಡಿಕೆಯಾಗಿದೆ. ಈ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.

Latest Videos
Follow Us:
Download App:
  • android
  • ios