ಕಾಶ್ಮೀರದ ಪೂಂಛ್ ಸೆಕ್ಟರ್’ನಲ್ಲಿ ಪಾಕಿಸ್ತಾನವು ಕದಮ ವಿರಾಮ ಉಲ್ಲಂಘಿಸಿ ನಡೆಸಿದ ಶೆಲ್ ದಾಳಿಯಲ್ಲಿ ಇಬ್ಬರು ನಾಗರೀಕರು ಮೃಪಟ್ಟಿದ್ದಾರೆ. ಪೂಂಛ್’ನ ಬಳಿ ಗಡಿ ನಿಯಂತ್ರಣ ರೇಖೆಯ ಬಳಿ ಇಂದು ಬೆಳಗ್ಗಿನ ಜಾವ ಯಾವುದೇ ಪ್ರಚೋದನೆಯಿಲ್ಲದೇ ಪಾಕ್ ಪಡೆಗಳು ಶೆಲ್ ದಾಳಿಯನ್ನು ನಡೆಸಿವೆ.
ಪೂಂಛ್, ಜಮ್ಮು ಮತ್ತು ಕಾಶ್ಮೀರ: ಕಾಶ್ಮೀರದ ಪೂಂಛ್ ಸೆಕ್ಟರ್’ನಲ್ಲಿ ಪಾಕಿಸ್ತಾನವು ಕದಮ ವಿರಾಮ ಉಲ್ಲಂಘಿಸಿ ನಡೆಸಿದ ಶೆಲ್ ದಾಳಿಯಲ್ಲಿ ಇಬ್ಬರು ನಾಗರೀಕರು ಮೃಪಟ್ಟಿದ್ದಾರೆ.
ಪೂಂಛ್’ನ ಬಳಿ ಗಡಿ ನಿಯಂತ್ರಣ ರೇಖೆಯ ಬಳಿ ಇಂದು ಬೆಳಗ್ಗಿನ ಜಾವ ಯಾವುದೇ ಪ್ರಚೋದನೆಯಿಲ್ಲದೇ ಪಾಕ್ ಪಡೆಗಳು ಶೆಲ್ ದಾಳಿಯನ್ನು ನಡೆಸಿವೆ. ದಾಳಿಯಲ್ಲಿ ಒಂದೇ ಕುಟುಂಬದ ದಂಪತಿ ಮೃತಪಟ್ಟಿದ್ದು, ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ.
ಪಾಕ್ ದಾಳಿಗೆ ಭಾರತೀಯ ಯೋಧರು ಕೂಡಾ ತಕ್ಕ ಉತ್ತರವನ್ನು ನೀಡಿದ್ದಾರೆ. ಇನ್ನೊಂದು ಘಟನೆಯಲ್ಲಿ, ಬಂಡೀಪೋರಾದ ಹಾಜಿನ್ ಪ್ರದೇಶದಲ್ಲಿ ಉಗ್ರರು ನಡೆಸಿದ ದಾಳಿಗೆ ಇಬ್ಬರು ಜವಾನರು ಗಾಯಗೊಂಡಿದ್ದಾರೆ.
(ಸಾಂದರ್ಭಿಕ ಚಿತ್ರ)
