ಬೆಂಗಳೂರು: ಇಬ್ಬರು ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. 

ಡಾ.ಕೊನ ವಂಶಿ ಕೃಷ್ಣ ಅವರನ್ನು ತುಮಕೂರು ಜಿಲ್ಲಾ ವರಿಷ್ಠಾಧಿಕಾರಿಯನ್ನಾಗಿ ಮತ್ತು ಪವರ್‌ ಪ್ರವೀಣ್‌ ಮಧುಕರ್‌ ಅವರನ್ನು ಸಿಐಡಿ ಡಿಐಜಿಯಾಗಿ ನೇಮಕ ಮಾಡಿ ಆದೇಶಿಸಲಾಗಿದೆ.

ಇತ್ತೀಚೆಗಷ್ಟೇ ಹೆಚ್ಚಿನ ಸಂಖ್ಯೆಯ ತಹಶೀಲ್ದಾರ್ ಗಳನ್ನು, ಐಪಿಎಸ್, ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಇದೀಗ ಮತ್ತೆ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.