ಭೋಪಾಲ್[ಅ.26]: ರಾಜಸ್ಥಾನದ ಸಿರೋಹಿಯಲ್ಲಿ ನಡೆದ ಘಟನೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೋಡುಗರನ್ನು ಬೆಚ್ಚಿ ಬೀಳಿಸಿದೆ. ಚೆನ್ನಾಗಿದ್ದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ ಮುಂದಿನ ಹೆಜ್ಜೆ ಇಡುತ್ತಿದ್ದಂತೆಯೇ ಭೂಮಿಯೊಳಗೆ ಹುದುಗಿ ಹೋದ ವಿಡಿಯೋ ಇದಾಗಿದ್ದು, ಸದ್ಯ ಪಾದಾಚಾರಿಗಳಲ್ಲಿ ಇದು ನಡುಕ ಹುಟ್ಟಿಸಿದೆ.

ಆರಂಭದಲ್ಲಿ ಪ್ರಬಲ ಭೂಕಂಪದಿಂದಾಗಿ ಬಿರುಕು ಉಂಟಾಗಿದೆ. ಹೀಗಾಗಿ ಪಾದಾಚಾರಿ ಬಿದ್ದಿದ್ದಾನೆಂಬ ಅನಿಸಿಕೆ ವ್ಯಕ್ತವಾಗಿತ್ತು. ಆದರೆ ಇದಾದ ಬಳಿಕ ನಡೆದ ತನಿಖೆಯಲ್ಲಿ ಈ ರಸ್ತೆ ಚರಂಡಿಯೊಂದರ ಮೇಲೆ ನಿರ್ಮಾಣವಾಗಿದೆ ಎಂಬ ಮಾಹಿತಿ ಬಯಲಾಗಿದೆ. ಹೀಗಾಗಿ ಈ ರಸ್ತೆ ನೋಡ ನೋಡುತ್ತಿದ್ದಂತೆಯೇ ಬಿರುಕು ಬಿಟ್ಟಿದೆ ಎಂಬ ರಹಸ್ಯ ಬಯಲಾಗಿದೆ. ಸದ್ಯ ಘಟನೆಯಲ್ಲಿ ಗಾಯಾಳುವಾದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಘಟನೆಯಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದು, ಏನಾಗುತ್ತಿದೆ ಎಂದು ಅವರಿಗೂ ತಿಳಿಯದಾಗಿದೆ. ಆದರೆ ಎಚ್ಚೆತ್ತುಕೊಂಡ ಅವರು ಕೂಡಲೇ ಸ್ಥಳಕ್ಕೆ ಧಾವಿಸಿ ಭೂಮಿಯಲ್ಲಿ ಹುದುಗಿ ಹೋದವರನ್ನು ಎತ್ತಿ, ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ. 

ಅಕ್ಟೋಬರ್ 26ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ