ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದೇ ವರ್ಷದ ಕೊನೆಯಲ್ಲಿ ಚತ್ತೀಸ್ ಗಢದಲ್ಲಿ ಚುನಾವಣೆ ನಡೆಯುತ್ತಿದ್ದು ಸಮಾಜ ಸೇವೆಗಾಗಿ ರಾಜಕೀಯ ಪ್ರವೇಶಿಸಿದ್ದಾಗಿ ಹೇಳಿದ್ದಾರೆ.
ಚತ್ತೀಸ್ ಗಢ : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಇದೇ ವೇಳೆ ಕೆಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗೂ ಕೂಡ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಇದೇ ವರ್ಷದ ಕೊನೆಯಲ್ಲಿ ಚತ್ತೀಸ್ ಗಢದಲ್ಲಿ ಚುನಾವಣೆ ನಡೆಯುತ್ತಿದ್ದು ಇದೀಗ ಇಬ್ಬರು ಮಾಜಿ ಐಎಎಸ್ ಅಧಿಕಾರಿಗಳು ಚುನಾವಣಾ ನಿಟ್ಟಿನಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಸರ್ಜಸ್ ಮಿಂಜ್ ಹಾಗೂ ಆರ್ ಪಿ ಎಸ್ ತ್ಯಾಗಿ ಪಕ್ಷವನ್ನು ಸೇರಿದ್ದಾರೆ.
ಕಾಂಗ್ರೆಸ್ ಮುಖಂಡರು ಕಳೆದ ಒಂದು ವರ್ಷಗಳಿಂದ ಪಕ್ಷವನ್ನು ಸೇರ್ಪಡೆಗೊಳ್ಳಲು ಆಹ್ವಾನವನ್ನು ಇತ್ತಿದ್ದರು ಈ ನಿಟ್ಟಿನಲ್ಲಿ ಪಕ್ಷ ಸೇರಿದ್ದಾಗಿ ಮಿಂಜ್ ಹೇಳಿದ್ದಾರೆ. ಈ ಹಿಂದೆಯೂ ಕೂಡ ತಾವು ಸಾರ್ವಜನಿಕ ಸೇವೆಯಲ್ಲಿಯೇ ಇದ್ದು ಇದೊಂದು ಮುಂದುವರಿದ ಭಾಗವಷ್ಟೇ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಎಲ್ಲಾ ಐಡಿಯಾಲಜಿಗಳು ಹೊಂದಾಣಿಕೆಯಾಗುವ ನಿಟ್ಟಿನಲ್ಲಿ ಪಕ್ಷ ಸೇರಿದ್ದು ಅಭಿವೃದ್ಧಿ ಕಾರ್ಯುಗಳನ್ನು ಮಾಡುವುದೇ ಗುರಿಯಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಮುಂದಿನ ಚುನಾವಣೆಯಲ್ಲಿಯೂ ಕೂಡ ಸ್ಪರ್ಧೆ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಇನ್ನೋರ್ವ ಅಧಿಕಾರಿ ತ್ಯಾಗಿ ಅವರು ಉತ್ತರ ಪ್ರದೇಶದವರಾಗಿದ್ದು ಸದ್ಯ ಚತ್ತೀಸ್ ಗಢದ ಕೋರ್ಬಾ ಪ್ರದೇಶದಲ್ಲಿ ನೆಲೆಸಿದ್ದಾರೆ. ಇವರೂ ಕೂಡ ಸಾರ್ವಜನಿಕ ಸೇವೆ ಮಾಡಲು ರಾಜಕೀಯ ಉತ್ತಮ ಎನ್ನುವುದು ಇವರ ಅಭಿಪ್ರಾಯವಾಗಿದೆ.
ಕೆಲ ದಿನಗಳ ಹಿಂದಷ್ಟೇ ಜಿಲ್ಲಾಧಿಕಾರಿಯೋರ್ವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಬಿಜೆಪಿ ಸೇರ್ಪಡೆಯಾಗಿದ್ದರು.
