ಕುರುಬರಹಳ್ಳಿಯ ಜಿಸಿ ನಗರದ ಕುಮಾರ್(30) ಹಾಗೂ ನಂದಿನಿ ಬಡಾವಣೆಯಲ್ಲಿ ಮತ್ತೊಬ್ಬರು ಕೊಚ್ಚಿ ಹೋಗಿದ್ದು ಇವರ ಹೆಸರು ತಿಳಿದು ಬಂದಿಲ್ಲ.

ಬೆಂಗಳೂರು(ಮೇ.20): ನಗರದಲ್ಲಿ ಇಂದು ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ರಾಜಕಾಲುವೆಯಲ್ಲಿ ಇಬ್ಬರು ಪೌರ ಕಾರ್ಮಿಕರು ಕೊಚ್ಚಿ ಹೋಗಿದ್ದಾರೆ.

ಕುರುಬರಹಳ್ಳಿಯ ಜಿಸಿ ನಗರದ ಕುಮಾರ್(30) ಹಾಗೂ ನಂದಿನಿ ಬಡಾವಣೆಯಲ್ಲಿ ಮತ್ತೊಬ್ಬರು ಕೊಚ್ಚಿ ಹೋಗಿದ್ದು ಇವರ ಹೆಸರು ತಿಳಿದು ಬಂದಿಲ್ಲ. ಮೋರಿ ಸ್ವಚ್ಛ ಮಾಡುತ್ತಿದ್ದಾಗ ಕೊಚ್ಚಿ ಹೋಗಿದ್ದಾರೆ ಇವರಿಬ್ಬರ ಶೋಧಕ್ಕಾಗಿ ಅಗ್ನಿಶಾಮಕ ದಳ ತೀವ್ರ ಹುಡುಕಾಟ ನಡೆಸುತ್ತಿದೆ. ಸ್ಥಳಕ್ಕೆ ಮೇಯರ್ ಜೆ ಪದ್ಮಾವತಿ, ಸ್ಥಳೀಯ ಶಾಸಕ ಗೋಪಾಲಯ್ಯ ಹಾಗೂ ಸ್ಥಳೀಯ ಪೊಲೀಸರು ಆಗಮಿಸಿದ್ದಾರೆ.

ನಗರಾದ್ಯಂತ ಗುಡುಗು ಸಿಡಿಲು ಸಹಿತ ವರುಣನ ಆರ್ಭಟ ಜೋರಾಗಿ ಸತತ 2 ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ರಾಜಾಜಿನಗರ, ವಿನಾಯಕ ನಗರ, ಕೋರಮಂಗಲ, ಬನಶಂಕರಿ ಸೇರಿದಂತೆ ಹಲವು ಕಡೆ ಮರಗಳು ಧರೆಗುರುಳಿವೆ. ಬಿಬಿಎಂಪಿಯಿಂದ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಎಡಬಿಡದೆ ಸುರಿದ ಮಳೆಯಿಂದಾಗಿ ಮೆಜಸ್ಟಿಕ್, ಕೆ.ಆರ್.ಮಾರುಕಟ್ಟೆ, ಶಿವಾಜಿ ನಗರ, ಮಲ್ಲೇಶ್ವರಂ, ರಾಜಾಜಿನಗರ ಸೇರಿದಂತೆ ಹಲವು ಕಡೆ ಸಂಚಾರಿ ದಟ್ಟಣೆ ಉಂಟಾಗಿತ್ತು.