ಕರ್ನಾಟಕ ವಿಧಾನ‌ಪರಿಷತ್ ಗೆ  2 ಸ್ಥಾನಕ್ಕೆ ಇಂದು [ಮಂಗಳವಾರ] ನಾಮ‌ನಿರ್ದೇಶನ ಮಾಡಲಾಗಿದೆ. ಹಾಗಾದ್ರೆ ನೂತನ ವಿಧಾನಪರಿಷತ್ ಸದಸ್ಯರು ಯಾರು? ಇಲ್ಲಿದೆ ವಿವರ.

ಬೆಂಗಳೂರು, [ಅ.30]: ಕರ್ನಾಟಕ ವಿಧಾನ‌ಪರಿಷತ್ ಗೆ ನಡೆಯಬೇಕಿರುವ ಮೂರು ನಾಮನಿರ್ದೇಶನ ಸದಸ್ಯರ ಪೈಕಿ 2 ಸ್ಥಾನಕ್ಕೆ ಇಂದು [ಮಂಗಳವಾರ] ನಾಮ‌ನಿರ್ದೇಶನ ಮಾಡಲಾಗಿದೆ. 

ರಾಜ್ಯಪಾಲರು ಕಾಂಗ್ರೆಸ್​ನ ಇಬ್ಬರು ಸದಸ್ಯರನ್ನ ಪರಿಷತ್​ ಸ್ಥಾನಕ್ಕೆ ನೇಮಕಗೊಳಿಸಿದ್ದಾರೆ. ಕಾಂಗ್ರೆಸ್ ಸದಸ್ಯರಾದ ಯು.ಬಿ ವೆಂಕಟೇಶ್ ಹಾಗೂ ಪ್ರಕಾಶ್ ರಾಥೋಡ್​ರನ್ನು ನಾಮನಿರ್ದೇಶಿಸಿ ರಾಜ್ಯಪಾಲ ವಜೂಭಾಯ್ ವಾಲಾ ಆದೇಶ ಹೊರಡಿಸಿದ್ದಾರೆ.

ಒಟ್ಟು ಮೂರು ಸದಸ್ಯರನ್ನ ವಿಧಾನಪರಿಷತ್ ಗೆ ನಾಮನಿರ್ದೇಶನ ಮಾಡಲಾಗುತ್ತದೆ. ಇದರಲ್ಲಿ ಕಾಂಗ್ರೆಸ್ ಎರಡು ಸ್ಥಾನ ಪಡೆದುಕೊಂಡಿದ್ದು, ಇನ್ನೊಂದು ಸ್ಥಾನವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದೆ.

ಆದರೆ, ಇನ್ನು ಜೆಡಿಎಸ್ ಕಡೆಯಿಂದ ಯಾರು ನಾಮನಿರ್ದೇಶನಗೊಳ್ಳುತ್ತಾರೆ ಎನ್ನುವುದು ಇನ್ನೂ ತೀರ್ವನವಾಗಿಲ್ಲ.