ಭಾರತದ ಪ್ರಧಾನ ಮಂತ್ರಿ ಯಾರು? ಹೀಗೊಂದು ಪ್ರಶ್ನೆ ನಿಮ್ಮನ್ನು ಮತ್ತೆ ಕೇಳಲೇಬೇಕಾದ ಸ್ತಿತಿ ೆದುರಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ  ಎಂಬುದು ಎಲ್ಲರಿಗೂ ಗೊತ್ತು. ಆದರೆ ನಿನ್ನೆ ರಾತ್ರಿಯಿಂದ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಭಾರತದ ಪ್ರಧಾನಿಯಾಗಿದ್ದರು! ಯಾಕೆ ಅಂತೀರಾ? 

ನವದೆಹಲಿ[ಆ.6] ಟ್ವಿಟರ್ ನಲ್ಲಿ ಸ್ವರಾ ಭಾಸ್ಕರ್ ಅವರನ್ನು ಭಾರತದ ಪ್ರಧಾನಿ ಎಂಬಂತೆ ಬಿಂಬಿಸುವ ಹಾಷ್ ಟ್ಯಾಗ್ ನಿನ್ನೆ ಕಾರಣವಿಲ್ಲದ ಕಾರಣಕ್ಕೆ ಟ್ವಿಟರ್ ನಲ್ಲಿ ಟ್ರೆಂಡ್ ಆಯಿತು. ಭಾರತದ ರಾಷ್ಟ್ರೀಯತೆ ಮತ್ತು ಆಂತರಿಕ ಭದ್ರತೆಗೆ ಸಂಬಂಧಿಸಿದ ವಿಷಯಗಳ ಕುರಿತು ಸ್ವರಾ ಭಾಸ್ಕರ್ ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳು ಆಕೆಯನ್ನು ಭಾರತದ ಪ್ರಧಾನಿ ಎಂದು ಬಿಂಬಿಸಿತು.

ಒಂದೆಡೆ ಹಾಷ್ ಟ್ಯಾಗ್ ಹಾಕಿ ಕಾಲೆಳೆಯುವವರ ಸಂಖ್ಯೆ ಏರುತ್ತಲೇ ಹೋಯಿತು. ಅಧಿಕಾರ ಸಿಕ್ಕಿ ನಾಲ್ಕು ವರ್ಷವಾದರೂ ಸ್ವರಾ ಆಡಳಿತದಲ್ಲಿ ಬದಲಾವಣೆ ತಂದಿಲ್ಲ.. ಎಲ್ಲಿದೆ ಅಚ್ಚೇ ದಿನ ? ಎಂಬ ಮಾತುಗಳನ್ನಿಟ್ಟು ಹಾಸ್ಯ ಮಾಡಲಾಯಿತು. ಜತೆಗೆ ಸ್ವರಾ ರಾಜೀನಾಮೆ ನೀಡಬೇಕು ಎಂಬ ಆಗ್ರಹ ಕೂಡಾ ಮಾಡಲಾಯಿತು.

Scroll to load tweet…
Scroll to load tweet…