Asianet Suvarna News Asianet Suvarna News

ಟಿ.ವಿ.ರಾಮಚಂದ್ರನ್ ಅವರಿಗೆ ವರ್ಷದ ನಮ್ಮ ಬೆಂಗಳೂರಿಗ ಪ್ರಶಸ್ತಿ

ಟಿ.ವಿ.ರಾಮಚಂದ್ರನ್ ಅವರು ಇಂಡಿಯನ್ ಇನ್ಸ್'ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯ ಹಿರಿಯ ವಿಜ್ಞಾನಿಯಾಗಿದ್ದಾರೆ. ಇವರು ನಗರದಲ್ಲಿ ಜಲಸಂರಕ್ಷಣೆ ಕುರಿತು ಸಾಕಷ್ಟು ಸಂಶೋಧನೆಗಳನ್ನು ನಡೆಸಿದ್ದಾರೆ.

tv ramachandran is the bengalurean of the year 2016

ಬೆಂಗಳೂರು(ಮಾ. 12): ಉದ್ಯಾನನಗರಿಯ ನೈಸರ್ಗಿಕ ಸಂರಕ್ಷಣೆಯ ಕಾರ್ಯದಲ್ಲಿ ಅತೀವ ಆಸಕ್ತಿ ಹಾಗೂ ಅವಿರತ ಶ್ರಮ ಹಾಕುತ್ತಿರುವ ಹಿರಿಯ ವಿಜ್ಞಾನಿ ಪ್ರೊ| ಟಿ.ವಿ. ರಾಮಚಂದ್ರನ್ ಅವರಿಗೆ ವರ್ಷದ ನಮ್ಮ ಬೆಂಗಳೂರಿಗ ಪ್ರಶಸ್ತಿ ಕೊಟ್ಟು ಗೌರವಿಸಲಾಗಿದೆ. ಟೌನ್'ಹಾಲ್'ನಲ್ಲಿ ನಮ್ಮ ಬೆಂಗಳೂರು ಪ್ರತಿಷ್ಠಾನ ಆಯೋಜಿಸಿದ ಕಾರ್ಯಕ್ರಮದಲ್ಲಿ ಡಾ. ರಾಮಚಂದ್ರನ್'ಗೆ 2016ನೇ ಸಾಲಿನ ವರ್ಷದ ಬೆಂಗಳೂರಿಗ ಪ್ರಶಸ್ತಿ ನೀಡಲಾಯಿತು.

ಟಿ.ವಿ.ರಾಮಚಂದ್ರನ್ ಅವರು ಇಂಡಿಯನ್ ಇನ್ಸ್'ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯ ಹಿರಿಯ ವಿಜ್ಞಾನಿಯಾಗಿದ್ದಾರೆ. ಇವರು ನಗರದಲ್ಲಿ ಜಲಸಂರಕ್ಷಣೆ ಕುರಿತು ಸಾಕಷ್ಟು ಸಂಶೋಧನೆಗಳನ್ನು ನಡೆಸಿದ್ದಾರೆ. ತುರ್ತಾಗಿ ಜಲಸಂರಕ್ಷಣೆಯಾಗದಿದ್ದರೆ ಬೆಂಗಳೂರು ಇನ್ನೈದು ವರ್ಷದಲ್ಲಿ ವಾಸಯೋಗ್ಯವಾಗಿ ಉಳಿಯುವುದಿಲ್ಲವೆಂದು ಇವರು ಹಲವು ಬಾರಿ ಎಚ್ಚರಿಸಿದ್ದಾರೆ.

ನಮ್ಮ ಬೆಂಗಳೂರು ಪ್ರಶಸ್ತಿಗಳು:

1) ವರ್ಷದ ಬೆಂಗಳೂರಿಗ (Namma Bengalurean of the Year): ಪ್ರೊ| ಡಾ. ಟಿವಿ ರಾಮಚಂದ್ರನ್, ಐಐಎಸ್'ಸಿ ಹಿರಿಯ ವಿಜ್ಞಾನಿ

2) ವರ್ಷದ ಸರಕಾರಿ ಅಧಿಕಾರಿ (Government Official of the Year): ಟಿ.ಜಗನ್ನಾಥ ರಾವ್
ಇವರು ಬಿಬಿಎಂಪಿಯ ಅರಣ್ಯ ಮತ್ತು ಕೆರೆ ಸಂರಕ್ಷಣಾ ಅಧಿಕಾರಿಯಾಗಿದ್ದಾರೆ. ನಗರದ ಕೆರೆಗಳ ಪುನರುಜ್ಜೀವನ ಹಾಗೂ ಸಂರಕ್ಷಣೆಯಲ್ಲಿ ಇವರ ಪಾತ್ರ ಬಹಳ ಮಹತ್ವದ್ದು. ನಗರದ 48 ಕೆರೆಗಳಿಗೆ ಇವರು ಫೆನ್ಸ್'ಗಳನ್ನು ಹಾಕಿಸಿದ್ದಾರೆ.

3) ವರ್ಷದ ರೈಸಿಂಗ್ ಸ್ಟಾರ್ (Rising Star of the Year): ಹರ್ಷಿಲ್ ಮಿತ್ತಲ್
"ಲೆಟ್ಸ್ ಸ್ಪ್ರೆಡ್ ಲವ್" ಎಂಬ ಎನ್'ಜಿಓ ಸ್ಥಾಪಿಸಿರುವ ಹರ್ಷಿಲ್ ಮಿಟ್ಟಲ್, ನಿರ್ಗತಿಕರು, ಸ್ಲಮ್ ನಿವಾಸಿಗಳು, ವೃದ್ಧಾಶ್ರಮ ಮೊದಲಾದ ಅಶಕ್ತ ಮಂದಿಗೆ ಆಹಾರ ಸರಬರಾಜು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮನೆಮನೆಗಳಿಂದ ಆಹಾರ ಸಂಗ್ರಹಿಸಿ ಅದನ್ನು ಇಂತಹ ಬಡಬಗ್ಗರು, ದೀನರಿಗೆ ಹಂಚುತ್ತಾರೆ. ನಿರ್ಗತಿಕ ಮಕ್ಕಳಿಗೆ ಇವರು ಶಿಕ್ಷಣದ ವ್ಯವಸ್ಥೆ ಕಲ್ಪಿಸುವ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ.

4) ವರ್ಷದ ನಾಗರಿಕ (Citizen Individual of the Year): ಗೀತಾ ಮೆನನ್
ಸ್ತ್ರೀ ಜಾಗೃತಿ ಸಮಿತಿ ಸಂಘಟನೆಯ ಕಾರ್ಯದರ್ಶಿಯಾಗಿರುವ ಗೀತಾ ಮೆನನ್ ಅವರು ಕೂಲಿಕಾರ್ಮಿಕರ ಹಕ್ಕಿಗಾಗಿ ಸಾಕಷ್ಟು ಹೋರಾಟ ನಡೆಸಿದ್ದಾರೆ. 70ಕ್ಕೂ ಹೆಚ್ಚು ಮನೆಗೆಲಸದ ಮಕ್ಕಳನ್ನು ರಕ್ಷಿಸಿ ಹೊಸ ಜೀವನ ಕಲ್ಪಿಸಿದ್ದಾರೆ.

5) ವರ್ಷದ ಮಾಧ್ಯಮ ವ್ಯಕ್ತಿ (Media Individual of the Year): ಧನ್ಯಾ ರಾಜೇಂದ್ರನ್
ದೇಶದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರೆನಿಸಿರುವ ಧನ್ಯಾ ರಾಜೇಂದ್ರನ್, ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಟೈಮ್ಸ್ ನೌ, ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ಮೊದಲಾದೆಡೆ ಕೆಲಸ ಮಾಡಿರುವ ಇವರು ಸದ್ಯ "ದಿ ನ್ಯೂಸ್ ಮಿನ್ಯೂಟ್" ಎಂಬ ನ್ಯೂಸ್ ವೆಬ್'ಸೈಟ್ ನಡೆಸುತ್ತಿದ್ದಾರೆ. ಬಹಳ ಕಡಿಮೆ ಅವಧಿಯಲ್ಲಿ ಇವರ ವೆಬ್'ಸೈಟ್ ಸಾಕಷ್ಟು ಜನಪ್ರಿಯತೆ ಗಳಿಸಿದೆ.

6) ವರ್ಷದ ಸಾಮಾಜಿಕ ಉದ್ದಿಮೆದಾರ (Social Entrepreneur of the Year): ಜಾಸ್ಮೀನ್ ಪತೇಜಾ
ಮಹಿಳೆಯರ ಮೇಲಿನ ದೌರ್ಜನ್ಯ ಘಟನೆಗಳನ್ನು ತಡೆಯಲೆಂದೇ ಇವರು ಬ್ಲ್ಯಾಂಕ್ ನಾಯ್ಸ್ ಸಂಸ್ಥೆ ಕಟ್ಟಿದ್ದಾರೆ. ದೌರ್ಜನ್ಯದ ವಿರುದ್ಧ ತೊಡೆತಟ್ಟಿ ನಿಲ್ಲಲು ಮಹಿಳೆಯರಿಗೆ ಧೈರ್ಯ ಮತ್ತು ಸ್ಫೂರ್ತಿ ತುಂಬ ಕಾರ್ಯದಲ್ಲಿ ಇವರ ಸಂಸ್ಥೆ ತೊಡಗಿಸಿಕೊಂಡಿದೆ.

Latest Videos
Follow Us:
Download App:
  • android
  • ios