ಕೇರಳದ ವೈನಾಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿ ಸೋತಿದ್ದ ಬಿಜೆಪಿ ಬೆಂಬಲಿತ, ಭಾರತ್ ಧರ್ಮ ಜನ ಸೇನಾ ಪಕ್ಷದ ನಾಯಕ ತುಷಾರ್ ವೆಲ್ಲಪಳ್ಳಿ ಅವರನ್ನು 19 ಕೋಟಿ ರು. ವಂಚನೆ ಆರೋಪದ ಮೇಲೆ ದುಬೈನಲ್ಲಿ ಬಂಧಿಸಲಾಗಿದೆ.
ತಿರುವನಂತಪುರ (ಆ. 23): ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿ ಸೋತಿದ್ದ ಬಿಜೆಪಿ ಬೆಂಬಲಿತ, ಭಾರತ್ ಧರ್ಮ ಜನ ಸೇನಾ ಪಕ್ಷದ ನಾಯಕ ತುಷಾರ್ ವೆಲ್ಲಪಳ್ಳಿ ಅವರನ್ನು 19 ಕೋಟಿ ರು. ವಂಚನೆ ಆರೋಪದ ಮೇಲೆ ದುಬೈನಲ್ಲಿ ಬಂಧಿಸಲಾಗಿದೆ.
ದುಬೈನ ಅಜ್ಮಾನ್‌ನಲ್ಲಿದ್ದ ವೆಲ್ಲಪಳ್ಳಿಗೆ ಸಂಬಂಧಿಸಿದ ಕಂಪನಿಯೊಂದು ನಷ್ಟಉಂಟಾಗಿತ್ತು. ಹೀಗಾಗಿ ಗುತ್ತಿಗೆದಾರರಿಗೆ ಪರಿಹಾರ ರೂಪವಾಗಿ 19 ಕೋಟಿ ರು. ಚೆಕ್ ನೀಡಿದ್ದರು. ಚೆಕ್ ಬೌನ್ಸ್ ಆದ ಕಾರಣ ವೆಲ್ಲಪಳ್ಳಿ ವಿರುದ್ಧ ತ್ರಿಶೂರ್‌ನ ಎನ್. ಅಬ್ದುಲ್ಲಾ ಎಂಬುವವರು ನೀಡಿದ ದೂರಿನ ಮೇರೆಗೆ ಬಂಧಿಸಲಾಗಿದೆ.
ಈ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಿದೇಶಾಂಗ ಸಚಿವ ಎಸ್.ಜೈಶಂಕರ್‌ರಿಗೆ ಪತ್ರ ಬರೆದಿದ್ದು, ಸಹಾಯಕ್ಕೆ ಮನವಿ ಮಾಡಿದ್ದಾರೆ. ವೆಲ್ಲಪಳ್ಳಿಗೆ ಜಾಮೀನು ಸಿಕ್ಕಿದೆ.
