ಪ್ರಿಯಕರ ಮಾತನಾಡುತ್ತಿಲ್ಲ ಎಂದು ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು: ಪ್ರಿಯಕರ ಮಾತನಾಡುತ್ತಿಲ್ಲ ಎಂದು ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರಿನ ಎಸ್. ಎಸ್. ಪುರಂನ ಹಾಸ್ಟೆಲ್​ನಲ್ಲಿ ಮೊಬೈಲ್’ನಲ್ಲಿ ರೆಕಾರ್ಡ್ ಮಾಡಿಕೊಂಡು ಆತ್ಮಹತ್ಯೆಗೆ ಯುವತಿ ಯತ್ನಿಸಿದ್ದಾಳೆ.ಪ್ರಿಯಕರ ಮನಸ್ಸಿಗೆ ನೋವುಂಟು ಮಾಡಿದ್ದಾನೆಂದು 70 ನಿದ್ರೆ ಮಾತ್ರೆಯನ್ನು ಯುವತಿ ನುಂಗಿದ್ದಾಳೆ.

ಯುವತಿ ಕೆಲಸ ಮುಗಿಸಿಕೊಂಡು ಬಂದು ಸಂಜೆ ಹಾಸ್ಟೆಲ್’ನಲ್ಲಿ ತನ್ನ ‘ಲೈವ್​ ಸೂಸೈಡ್’​​ಗೆ ಯತ್ನವನ್ನು ವಿಡಿಯೋ ರೆಕಾರ್ಡ್ ಮಾಡಿ ಪ್ರಿಯಕರನಿಗೆ ಕಳುಹಿಸಿದ್ದಾಳೆ.

ಮಾತ್ರೆ ನುಂಗುತ್ತಾ ಪ್ರಿಯಕರನಿಗೆ ಮತ್ತು ಸ್ನೇಹಿತೆಗೆ ಕ್ಷಮೆ ಕೇಳಿದ ಯುವತಿ , ನಾನು ಸಾಯುತ್ತಿದ್ದೇನೆ ನನ್ನನ್ನು ಕ್ಷಮಿಸಿ ಎಂದು ಹೇಳಿದ್ದಾಳೆ.

ವಿಡಿಯೋ ನೋಡಿ ಕೂಡಲೇ ಎಚ್ಚೆತ್ತ ಪ್ರಿಯಕರ ಹಾಗೂ ಸ್ನೇಹಿತರು, ತಕ್ಷಣವೇ ಹಾಸ್ಟೆಲ್ ಗೆ ಹೋಗಿ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿದ್ದರಿಂದ ಯುವತಿ ಬದುಕುಳಿದಿದ್ದಾಳೆ.