ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಅಭೂತಪೂರ್ವ ಗೆಲುವು ಸಾಧಿಸಿದ ಬಿಜೆಪಿ ನಾಯಕರೋರ್ವರು ಇದೇ ನನ್ನ ಕೊನೆಯ ಚುನಾವಣೆ. ಇನ್ನು ಮುಂದೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದಿದ್ದಾರೆ. 

ತುಮಕೂರು : ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದ ಸ್ಪರ್ಧೆ ಮಾಡಿ ದೇವೇಗೌಡರ ವಿರುದ್ಧ ಅಭೂತಪೂರ್ವ ಗೆಲುವು ಸಾಧಿಸಿದ ಜಿ.ಎಸ್.ಬಸವರಾಜು ಇದೇ ನನ್ನ ಕೊನೆಯ ಚುನಾವಣೆ ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನು ಬಸವರಾಜು ಕೈ ಹಿಡಿಯಲಿದ್ದಾರೆ ಎನ್ನುವ ವದಂತಿಗೂ ಸ್ಪಷ್ಟನೆ ನೀಡಿದ್ದು, ನಾನು ಕಾಂಗ್ರೆಸ್ ಗೆ ಹೋಗುವುದು ಇಲ್ಲ. ಯಾರನ್ನು ಅಲ್ಲಿಂದ ಕರೆತರುವುದು ಇಲ್ಲ ಹೀಗೆಂದು ಹೇಳಿದ್ದಾರೆ. 

ನನಗೆ ಚುನಾವಣೆ ಸಂದರ್ಭದಲ್ಲಿ ಹಲವು ಕಾಂಗ್ರೆಸ್ ನಾಯಕರು ಬೆಂಬಲ ನೀಡಿದ್ದಾರೆ. ಕೆ.ಎನ್. ರಾಜಣ್ಣ ಅವರು ಬೆಂಬಲ ನೀಡಿದ್ದಾರೆ. ಇನ್ನು ರಾಜಣ್ಣ ಬೆಂಬಲಿಗರೂ ಕೂಡ ಸಿಂಪತಿಯಿಂದ ತಮಗೆ ಮತ ನೀಡಿದ್ದಾರೆ ಎಂದು ತುಮಕೂರಿನಲ್ಲಿ ಬಸವರಾಜು ಹೇಳಿದರು. 

ಅಲ್ಲದೇ ತಾವು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಇಚ್ಛಿಸುವುದಿಲ್ಲ ಎಂದ ಅವರು ಆರೋಗ್ಯ ಚೆನ್ನಾಗಿದ್ದಲ್ಲಿ ಯಾರನ್ನಾದರೂ ಸ್ಪರ್ಧೆಗೆ ನಿಲ್ಲಿಸುತ್ತೇನೆ ಎಂದರು. 

ತುಮಕೂರಿನಲ್ಲಿ ಜೆಡಿಎಸ್ ಹಿರಿಯ ನಾಯಕ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ತಾವು ಗೆಲುವು ಸಾಧಿಸಿದ್ದು, ಮಧುಗಿರಿ ಹಾಲಿ ಶಾಸಕ ವೀರಭದ್ರು್ು ಕಾರ್ಯ ವೈಖರಿ ನೋಡಿ ಜನ ಬಿಜೆಪಿ ಮೆಚ್ಚಿ ಮತ ನೀಡಿದ್ದಾರೆ ಎಂದು ಬಸವರಾಜು ಹೇಳಿದರು.