Asianet Suvarna News Asianet Suvarna News

ಎಸ್ಐ ಗೂಂಡಾಗಿರಿ ವರ್ತನೆ: ಮಾಮೂಲಿ ಕೊಡದಿದ್ದಕ್ಕೆ ಪ್ರತಾಪ

ತುಮಕೂರು-ಶಿವಮೊಗ್ಗ ಹೆದ್ದಾರಿ ಪಕ್ಕದಲ್ಲಿರುವ ಟೀ ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದಿಸಿ ದೌರ್ಜವ್ಯವೆಸಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನು ಪ್ರಶ್ನಿಸಿದವರ ಮೇಲೂ ಇನ್ಸ್​ಪೆಕ್ಟರ್​ ಶ್ರೀಕಾಂತ್​ ಹಲ್ಲೆ ನಡೆಸಿದ್ದಾರೆ.

Tumakur PSI Hooliganism

ತುಮಕೂರು(ಜು.07): ಗೃಹ ಸಚಿವ ತವರು ಜಿಲ್ಲೆಯಲ್ಲೇ ಪೊಲೀಸ್​ ಇಲಾಖೆ ಮಾನ ಕಳೆಯುವಂತಾ ಪ್ರಕರಣ ನಡೆದಿದೆ. ಲಂಚದ ಹಣಕ್ಕಾಗಿ ರಕ್ಷಕರೇ ರಾಕ್ಷಸರಾಗಿದ್ದಾರೆ. ಖಾಕಿಯ ನಿಜ ಬಣ್ಣ ಬಯಲಾಗಿದೆ.

ಹೀಗೆ ಲಾಠಿಯಿಂದ ಚುಚ್ಚಿ.. ಟೀ ಅಂಗಡಿ ಮಾಲೀಕನನ್ನು ಎಳೆದಾಡುತ್ತಿರುವ  ಈತ ತಿಪಟೂರಿನ ಸಬ್ ಇನ್ಸೆಪೆಕ್ಟರ್ ಶ್ರೀಕಾಂತ್. ಮಾಮೂಲಿ ಕೊಡಲಿಲ್ಲ ಎಂದು ಈ ಪೊಲೀಸಪ್ಪ ಹೀಗೆ ರೌದ್ರಾವತಾರ ತಳೆದಿದ್ದಾನೆ. ಬಿದರೆಗುಡಿ ಗ್ರಾಮದಲ್ಲಿ ಹಾದು ಹೋಗುವ ತುಮಕೂರು-ಶಿವಮೊಗ್ಗ ಹೆದ್ದಾರಿ ಪಕ್ಕದಲ್ಲಿರುವ ಟೀ ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದಿಸಿ ದೌರ್ಜವ್ಯವೆಸಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನು ಪ್ರಶ್ನಿಸಿದವರ ಮೇಲೂ ಇನ್ಸ್​ಪೆಕ್ಟರ್​ ಶ್ರೀಕಾಂತ್​ ಹಲ್ಲೆ ನಡೆಸಿದ್ದಾರೆ.

15 ವರ್ಷಗಳಿಂದ ಕುಮಾರ್ ​ಟೀ ಅಂಗಡಿ ನಡೆಸುತ್ತಿದ್ದಾರೆ. ಕಳೆದ ಜೂನ್​ 3ನೇ ತಾರೀಕ್​ನಂದು ಅಂಗಡಿಗೆ ಬಂದ  ಇನ್ಸ್​ಪೆಕ್ಟರ್​ ಶ್ರೀಕಾಂತ್​ ಇನ್ಮುಂದೆ ಟೀ ಅಂಗಡಿ ಮುಂದುವರೆಯಬೇಕೆಂದರೆ  ತಿಂಗಳಿಗೆ 5 ಸಾವಿರ ಮಾಮೂಲಿ ನೀಡುವಂತೆ  ಧಮ್ಕಿ ಹಾಕಿದ್ದರು. ಮಾಮೂಲಿ ಕೊಡಲು ನಿರಾಕರಿಸಿದ್ದಕ್ಕೆ ಜೂನ್​ 5ನೇ ತಾರೀಕು ಬಂದು ಹೀಗೆ ದಾಂಧಲೆ ನಡೆಸಿದ್ದಾರೆ. ಒದ್ದು ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಪೊಲೀಸರೆಲ್ಲಾ ಸೇರಿ ಕುಮಾರ್ ನನ್ನು ಹಿಡಿದು ಬಲವಂತವಾಗಿ ಠಾಣೆಗೆ ಎಳೆದೋಯ್ದಿದ್ದಾರೆ. ಈ ರೀತಿ ಗೂಂಡಾಗಿರಿ ನಡೆಸಿದ್ದಕ್ಕೆ ಕುಮಾರ್ ಸಬ್ ಇನ್ಸೆಪೆಕ್ಟರ್ ವಿರುದ್ಧ ಡಿಎವೈಸ್ಪಿಗೆ ದೂರು ನೀಡಿದ್ದಾರೆ. ಆದರೆ ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕಾನೂನು ಕಾಪಾಡಬೇಕಾದ ಪೊಲೀಸರೇ ಲಂಚಕ್ಕಾಗಿ ರೌಡಿಗಳಂತೆ ವರ್ತಿಸಿರುವುದು ನಾಚಿಗೇಡು.

Follow Us:
Download App:
  • android
  • ios