ತಿರುಪತಿ ದೇವಸ್ಥಾನದ 44 ಹಿಂದೂಯೇತರ ಸಿಬ್ಬಂದಿ ವರ್ಗಾವಣೆ
ತಿರುಮಲದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ವಿವಿಧ ಸೇವೆಗಳಲ್ಲಿ ನಿಯೋಜನೆಯಾದ ಹಿಂದುಯೇತರ 44 ಕೆಲಸಗಾರರನ್ನು ಬೇರೆಡೆ ವರ್ಗಾವಣೆಗೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮುಂದಾಗಿದೆ.
ಹೈದರಾಬಾದ್ (ಜ.07): ತಿರುಮಲದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ವಿವಿಧ ಸೇವೆಗಳಲ್ಲಿ ನಿಯೋಜನೆಯಾದ ಹಿಂದುಯೇತರ 44 ಕೆಲಸಗಾರರನ್ನು ಬೇರೆಡೆ ವರ್ಗಾವಣೆಗೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮುಂದಾಗಿದೆ. ನಿಯಮಗಳ ಪ್ರಕಾರ ತಿರುಪತಿಗೆ ಹಿಂದುಯೇತರರು ಭೇಟಿ ನೀಡಬಹುದಾದರೂ, ದೇವಸ್ಥಾನದ ಕೆಲಸಗಳಲ್ಲಿ ಹಿಂದುಯೇತರರು ಭಾಗವಹಿಸುವಂತಿಲ್ಲ.
ಆದಾಗ್ಯೂ ದೇವಸ್ಥಾನದ ವಿವಿಧ ಸೇವೆಗ ಳಲ್ಲಿ 44 ಮಂದಿ ಹಿಂದುಯೇತರರು ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅವರನ್ನು ಬೇರೆ ಸರ್ಕಾರಿ ಹುದ್ದೆಗೆ ನಿಯೋಜಿಸಲು ರಾಜ್ಯ ಸರ್ಕಾರ ಕೂಡಾ ಒಪ್ಪಿದೆ ಎಂದು ತಿಳಿಸಿದೆ.