ಈ ಸುದ್ದಿಯ ಸತ್ಯಾಸತ್ಯತೆ ಸರಿಯಾಗಿ ಗೊತ್ತಿಲ್ಲ. ಸುದ್ದಿಯ ಪರಿಶೀಲನೆ ಮಾಡಿದಾಗ, ದೇವಮ್ಮ ದಾಖಲಾಗಿರುವ ಕುರಿತು ಆಸ್ಪತ್ರೆಯಲ್ಲಿ ಯಾವುದೇ ದಾಖಲೆ ಸಿಕ್ಕಿಲ್ಲ. ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ಕೂಡ ದಾಖಲಾಗಿಲ್ಲ.
ಮಳವಳ್ಳಿ(ಮಾ. 17): ರಿಯಾಲಿಟಿ ಶೋಗಳ ಸ್ಟಾರ್ ಸುನಾಮಿ ಕಿಟ್ಟಿ ಅವರ ತಾಯಿ ದೇವಮ್ಮ ಆತ್ಮಹತ್ಯೆಗೆ ಯತ್ನಿಸಿದ್ದಾರೆಂಬ ಸುದ್ದಿ ಕೇಳಿಬರುತ್ತಿದೆ. ದೇವಮ್ಮ ತಮ್ಮ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದರೆನ್ನಲಾಗಿದೆ. ಇಂದು ಸಂಜೆ ದೇವಮ್ಮನವರು ಇಲ್ಲಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು ಹೊರಬಂದಿರುವುದು ತಿಳಿದುಬಂದಿದೆ. ಆದರೆ, ಈ ಸುದ್ದಿಯ ಸತ್ಯಾಸತ್ಯತೆ ಸರಿಯಾಗಿ ಗೊತ್ತಿಲ್ಲ. ಸುದ್ದಿಯ ಪರಿಶೀಲನೆ ಮಾಡಿದಾಗ, ದೇವಮ್ಮ ದಾಖಲಾಗಿರುವ ಕುರಿತು ಆಸ್ಪತ್ರೆಯಲ್ಲಿ ಯಾವುದೇ ದಾಖಲೆ ಸಿಕ್ಕಿಲ್ಲ. ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ಕೂಡ ದಾಖಲಾಗಿಲ್ಲ.
ಸುನಾಮಿ ಕಿಟ್ಟಿ "ಇಂಡಿಯನ್" ರಿಯಾಲಿಟಿ ಶೋ ಮೂಲಕ ಕರ್ನಾಟಕದ ಜನತೆಗೆ ಚಿರಪರಿಚತರಾಗಿದ್ದರು. ಮೈಸೂರಿನ ಹೆಚ್'ಡಿ ಕೋಟೆಯಲ್ಲಿ ತಮ್ಮ ತಾಯಿ ದೇವಮ್ಮನವರ ತರಕಾರಿ ವ್ಯಾಪಾರದಲ್ಲಿ ಸಹಾಯ ಮಾಡುತ್ತಾ ಬೆಳೆದ ಸುನಾಮಿ ಕಿಟ್ಟಿ ಮುಂದೆ ಬಿಗ್ ಬಾಸ್ ರಿಯಾಲಿಟಿ ಶೋನಿಂದ ಇನ್ನಷ್ಟು ಜನಪ್ರಿಯತೆ ಗಳಿಸಿದ್ದಾರೆ. ಸಿನಿಮಾಗಳಲ್ಲೂ ನಟಿಸುವ ಆಫರ್ ಅವರಿಗೆ ಸಿಕ್ಕಿದೆ. ಸುನಾಮಿ ಕಿಟ್ಟಿ ಸಾಕಷ್ಟು ಸಂದರ್ಭಗಳಲ್ಲಿ ತಮ್ಮ ತಾಯಿ ದೇವಮ್ಮನವರನ್ನು ಸಾರ್ವಜನಿಕವಾಗಿ ಹೊಗಳುತ್ತಿರುತ್ತಾರೆ. ದೇವಮ್ಮ ಕೂಡ ಇತ್ತೀಚೆಗೆ ರಿಯಾಲಿಟಿ ಶೋವೊಂದರಲ್ಲಿ ಪಾಲ್ಗೊಂಡಿದ್ದರು.
