ಈ ನಡುವೆ ಫೇಸ್'ಬುಕ್ ಸಂಸ್ಥೆಯ ಅಧ್ಯಕ್ಷ ಮಾರ್ಕ್ ಜುಕರ್'ಬರ್ಗ್ ಕೂಡ ಟ್ರಂಪ್'ನ ನೂತನ ವಲಸೆ ನೀತಿಯನ್ನು ಖಂಡಿಸಿದ್ದಾರೆ.

ಸ್ಯಾನ್ ಪ್ರಾನ್ಸಿಸ್ಕೊ(ಜ.28): ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೂತನ ವಲಸೆ ನೀತಿಯಿಂದ ಮುಂದಿನ ದಿನಗಳಲ್ಲಿ ಅಮೆರಿಕಾ ದೇಶಕ್ಕೆ ತೊಂದರೆಯುಂಟಾಗಲಿದೆ ಎಂದು ಭಾರತದ ಮೂಲದ ಸಿಇಒ ಸುಂದರ್ ಪಿಚ್ಚೈ ಆತಂಕ ವ್ಯಕ್ತಪಡಿಸಿದ್ದಾರೆ.

ಟ್ರಂಪ್ 7 ಮುಸ್ಲಿಂ ರಾಷ್ಟ್ರಗಳ ನಾಗರಿಕರ ವಿರುದ್ಧ ಅಮೆರಿಕಾ ದೇಶಕ್ಕೆ ನಿಷೇಧದ ನಿರ್ಧಾರ ಕೈಗೊಂಡ ನಂತರ ಮಾತನಾಡಿದ ಅವರು,ಅಮೆರಿಕಾ ಅಭಿವೃದ್ಧಿ ಹೊಂದಿರುವುದೇ ವಿಶ್ವದ ಎಲ್ಲ ದೇಶಗಳ ಬುದ್ಧಿವಂತರಿಂದ. ಟ್ರಂಪ್ ಅವರ ವಲಸೆ ನೀತಿಯ ನಿರ್ಧಾರ ನಮಗೆ ಬೇಸರ ತಂದಿದೆ. ಈ ರೀತಿಯ ನಿರ್ಧಾರಗಳಿಂದ ದೇಶಕ್ಕೆ ಒಳಿತಾಗುವುದಿಲ್ಲ ಎಂದಿದ್ದಾರೆ.

ಟ್ರಂಪ್'ನ ಈ ಆದೇಶದಿಂದ ಗೂಗಲ್ ಸಂಸ್ಥೆಯ 100 ಸಿಬ್ಬಂದಿಗೆ ತೊಂದರೆಯಾಗಲಿದೆ. ಅಲ್ಲದೆ ನಿಷೇಧಿಸುವ 7 ಮುಸ್ಲಿಂ ದೇಶಗಳಿಂದ ಸಂಸ್ಥೆಯು 187 ಮಂದಿಯನ್ನು ವಾಪಸ್ ಕರೆಸಿಕೊಂಡಿದೆ.

ಈ ನಡುವೆ ಫೇಸ್'ಬುಕ್ ಸಂಸ್ಥೆಯ ಅಧ್ಯಕ್ಷ ಮಾರ್ಕ್ ಜುಕರ್'ಬರ್ಗ್ ಕೂಡ ಟ್ರಂಪ್'ನ ನೂತನ ವಲಸೆ ನೀತಿಯನ್ನು ಖಂಡಿಸಿದ್ದಾರೆ.

ಹೊಸ ನಿಯಮದ ಪ್ರಕಾರ ನಿರಾಶ್ರಿತರು ಹಾಗೂ ಮುಸ್ಲಿಮ್ ದೇಶಗಳಾಗಿರುವ ರಾನ್, ಇರಾಕ್, ಲಿಬಿಯಾ, ಸೊಮಾಲಿಯಾ, ಸುಡಾನ್, ಸಿರಿಯಾ ಹಾಗೂ ಯೆಮೆನ್ ದೇಶಗಳ ನಾಗರಿಕರಿಗೆ ಮುಂದಿನ 90 ದಿನಗಳ ಅವಧಿಯಲ್ಲಿ ವೀಸಾ ನೀಡಲಾಗದೆಂದು ವರದಿಯಾಗಿದೆ.