. ನ.3-14ರವರೆಗೆ ಚೀನಾ, ಜಪಾನ್, ದಕ್ಷಿಣ ಕೊರಿಯಾ ಹಾಗೂ ಫಿಲಿಪೈನ್ಸ್ ದೇಶಗಳಿಗೆ ಭೇಟಿ ನೀಡಲಿದ್ದಾರೆ.
ನವದೆಹಲಿ(ಸೆ.29): ನವಂಬರ್ ತಿಂಗಳಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಷ್ಯಾ ರಾಷ್ಟ್ರಗಳ ಪ್ರವಾಸ ಕೈಗೊಳ್ಳಲಿದ್ದು, ಭಾರತಕ್ಕೆ ಬಾರದಿರಲು ನಿರ್ಧರಿಸಿದ್ದಾರೆ.
ಭಾರತಕ್ಕೆ ಬಾರದಿದ್ದರೂ ನವೆಂಬರ್' 10-14ರವರೆಗೆ ಮನಿಲಾದಲ್ಲಿ ನಡೆಯಲಿರುವ ಆಸಿಯನ್ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದಾರೆ. ನ.3-14ರವರೆಗೆ ಚೀನಾ, ಜಪಾನ್, ದಕ್ಷಿಣ ಕೊರಿಯಾ ಹಾಗೂ ಫಿಲಿಪೈನ್ಸ್ ದೇಶಗಳಿಗೆ ಭೇಟಿ ನೀಡಲಿದ್ದಾರೆ.
ಫಿಲಿಪೈನ್ಸ್'ನ ರಾಜಧಾನಿ ಮನಿಲಾದಲ್ಲಿ 10-14ರವರೆಗೆ ಆಸಿಯನ್(ಆಗ್ನೇಯ ಏಷ್ಯಾ ರಾಷ್ಟ್ರಗಳ ಕ್ಕೂಟ) ಶೃಂಗಸಭೆ ನಡೆಯಲಿದೆ. ಈ ಸಭೆಯಲ್ಲಿ ಟ್ರಂಪ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಇತ್ತಿಚಿನ ಕೆಲವು ದಿನಗಳಿಂದ ಉತ್ತರ ಕೊರಿಯಾ ರಾಷ್ಟ್ರ ಅಮೆರಿಕಾಕ್ಕೆ ಬೆದರಿಕೆ ಒಡ್ಡುತ್ತಿರುವ ಕಾರಣದಿಂದ ಟ್ರಂಪ್ ಏಷ್ಯಾ ಭೇಟಿ ಹೆಚ್ಚು ಮಹತ್ವ ಪಡೆದುಕೊಂಡಿದೆ.
