ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜೊತೆ ಲೈಂಗಿಕ ಸಂಬಂಧ ಹೊಂದಿದ್ದಳೆನ್ನಲಾಗಿದ್ದ ನೀಲಿಚಿತ್ರ ತಾರೆ ಸ್ಟಿಫಾನಿ ಕ್ಲಿಫರ್ಡ್‌ಗೆ ತಮ್ಮ ಸ್ವಂತ ಖಾತೆಯಿಂದ ಹಣ ನೀಡಿರುವುದಾಗಿ ಟ್ರಂಪ್‌ರ ನ್ಯಾಯವಾದಿ ಮೈಕಲ್‌ ಕೊಹೇನ್‌ ಹೇಳಿದ್ದಾರೆ.
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಲೈಂಗಿಕ ಸಂಬಂಧ ಹೊಂದಿದ್ದಳೆನ್ನಲಾಗಿದ್ದ ನೀಲಿಚಿತ್ರ ತಾರೆ ಸ್ಟಿಫಾನಿ ಕ್ಲಿಫರ್ಡ್ಗೆ ತಮ್ಮ ಸ್ವಂತ ಖಾತೆಯಿಂದ ಹಣ ನೀಡಿರುವುದಾಗಿ ಟ್ರಂಪ್ರ ನ್ಯಾಯವಾದಿ ಮೈಕಲ್ ಕೊಹೇನ್ ಹೇಳಿದ್ದಾರೆ.
‘2016ರಲ್ಲಿ, ಖಾಸಗಿ ವ್ಯವಹಾರವೊಂದರಲ್ಲಿ, ನಾನು ನನ್ನ ವೈಯಕ್ತಿಕ ಖಾತೆಯಿಂದ ಸ್ಟಿಫಾನಿಗೆ 84 ಲಕ್ಷ ರು. ಹಣ ಪಾವತಿಸಿದ್ದೇನೆ. ಸ್ಟಿಫಾನಿ ಜೊತೆಗಿನ ಹಣಕಾಸು ವ್ಯವಹಾರಕ್ಕೆ ಟ್ರಂಪ್ ಸಂಸ್ಥೆಯಾಗಲೀ, ಟ್ರಂಪ್ ಪ್ರಚಾರ ತಂಡವಾಗಲೀ ಪಕ್ಷಗಾರರಲ್ಲ. ಈ ಹಣ ನನಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿಯಾಗಲೀ ಹಿಂಪಾವತಿಯಾಗಿಲ್ಲ ಎಂದು ಕೊಹೇನ್ ಹೇಳಿದ್ದಾರೆ. ಹಣಕಾಸು ವ್ಯವಹಾರ ಕಾನೂನು ಬದ್ಧವಾಗಿದ್ದು, ಇದು ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ್ದುದಲ್ಲ’ ಎಂದು ಕೊಹೇನ್ ಸ್ಪಷ್ಟಪಡಿಸಿದ್ದಾರೆ.
‘ಕೆಲವೊಂದು ಬಾರಿ ವಿಷಯ ಸತ್ಯವಲ್ಲವಾದರೂ, ಅದರಿಂದ ಯಾವುದೇ ಹಾನಿಯಾಗುವುದಿಲ್ಲ, ನಷ್ಟವಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ನಾನು ಯಾವಾಗಲೂ ಟ್ರಂಪ್ರನ್ನು ರಕ್ಷಿಸುತ್ತೇನೆ’ ಎಂದು ಕೊಹೇನ್ ತಿಳಿಸಿದ್ದಾರೆ. ಟ್ರಂಪ್ ಜೊತೆಗಿನ ಸಂಬಂಧ ಮುಚ್ಚಿಡಲು ಸ್ಟಿಫಾನಿಗೆ ಹಣಪಾವತಿಯಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಆದರೆ, ಟ್ರಂಪ್ ಈ ಆರೋಪ ನಿರಾಕರಿಸಿದ್ದರು.
