ಟ್ರಂಪ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಟೆಲಿಫೋನ್'ನಲ್ಲಿ ಐಸಿಸ್ ಮಟ್ಟ ಹಾಕುವ ಕುರಿತಂತೆ ಮಾತುಕತೆ ನಡೆಸಿದ್ದಾರೆ ಎಂಬ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ.
ವಾಷಿಂಗ್ಟನ್(ಜ.29): ಐಎಸ್'ಐಎಸ್ ಉಗ್ರ ಸಂಘಟನೆ ವಿರುದ್ಧ ಹೋರಾಡಲು ತಂತ್ರಗಾರಿಕೆ ರೂಪಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಸೇನಾಪಡೆಗೆ 30 ದಿನಗಳ ಗಡುವು ನೀಡಿದ್ದಾರೆ.
‘ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ’ ಕೇವಲ ಅಮೆರಿಕಕ್ಕೆ ಮಾತ್ರ ಅಪಾಯವಲ್ಲ, ‘ಕ್ಯಾಲಿಫೇಟ್’ ಎಂಬ ತನ್ನದೇ ರಾಜ್ಯವನ್ನು ನಿರ್ಮಿಸಲು ಐಎಸ್ ಸಂಚು ರೂಪಿಸಿದೆ. ಆದರೆ, ಐಎಸ್‌ಗೆ ದೇಶದಲ್ಲಿ ಯಾವುದೇ ರೀತಿಯ ಸೌಕರ್ಯಗಳನ್ನು ನೀಡಲು ಸಾಧ್ಯವಿಲ್ಲ ಹಾಗೂ ಅವರೊಂದಿಗೆ ಸಂಧಾನದ ಅಗತ್ಯವಿಲ್ಲ ಎಂದು ಟ್ರಂಪ್ ಗುಡುಗಿದ್ದಾರೆ.
ಟ್ರಂಪ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಟೆಲಿಫೋನ್'ನಲ್ಲಿ ಐಸಿಸ್ ಮಟ್ಟ ಹಾಕುವ ಕುರಿತಂತೆ ಮಾತುಕತೆ ನಡೆಸಿದ್ದಾರೆ ಎಂಬ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ.
ಈ ಎಲ್ಲಾ ಕಾರಣಗಳಿಂದ ನಮ್ಮ ಆಡಳಿತಾಧಿಕಾರಿಗೆ ಭಯೋತ್ಪಾದಕ ಸಂಘಟನೆ ಐಎಸ್ ಅನ್ನು ಮಟ್ಟಹಾಕಲು ‘ಸಮಗ್ರ ಕಾರ್ಯತಂತ್ರ’ ಅಭಿವೃದ್ಧಿಪಡಿಸುವಂತೆ ಆದೇಶಿಸಿದ್ದೇನೆ’ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.