ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಸದಾ ನೀಲಿ ಚಿತ್ರ ತಾರೆಯೊಂದಿಗಿನ ಸಂಬಂಧದ ವಿಚಾರ ತಳುಕು ಹಾಕಿಕೊಳ್ಳುತ್ತಲೇ ಇದೆ.  ಇದೀಗ ಈ ಬಗ್ಗೆ ಅವರೇ ಸ್ವತಃ ಬಾಯಿ ಬಿಟ್ಟಿದ್ದು, ನೀಲಿ ಚಿತ್ರ ತಾರೆಗೆ ಹಣ ನೀಡಿದ್ದಾಗಿ ಟ್ರಂಪ್ ಒಪ್ಪಿಕೊಂಡಿದ್ದಾರೆ.

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಸದಾ ನೀಲಿ ಚಿತ್ರ ತಾರೆಯೊಂದಿಗಿನ ಸಂಬಂಧದ ವಿಚಾರ ತಳುಕು ಹಾಕಿಕೊಳ್ಳುತ್ತಲೇ ಇದೆ.

ಇದೀಗ ಈ ಬಗ್ಗೆ ಅವರೇ ಸ್ವತಃ ಬಾಯಿ ಬಿಟ್ಟಿದ್ದು, ನೀಲಿ ಚಿತ್ರ ತಾರೆಗೆ ಹಣ ನೀಡಿದ್ದಾಗಿ ಟ್ರಂಪ್ ಒಪ್ಪಿಕೊಂಡಿದ್ದಾರೆ.

ತಮ್ಮ ಜತೆಗಿನ ಸಂಬಂಧ ಬಹಿರಂಗಪಡಿಸದಂತೆ ಅಮೆರಿಕ ನೀಲಿ ಚಿತ್ರಗಳ ಸ್ಟಾರ್ ನಟಿ ಸ್ಟಾರ್ಮಿ ಡೇನಿಯಲ್ಸ್‌ಗೆ ವಕೀಲರ ಮೂಲಕ 87 ಲಕ್ಷ ರು. ಹಣ ನೀಡಿದ್ದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿದ್ದಾರೆ. 

ಆಕೆಗೆ ವಕೀಲರು ಹಣ ನೀಡಿದ್ದರು. ನಾನು ಅವರಿಗೆ ಹಣ ಮರಳಿಸಿದ್ದೇನೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ ಆಕೆ ಜೊತೆಗೆ ಯಾವುದೇ ಸಂಬಂಧ ಇರಲಿಲ್ಲ ಎಂದು ಕೂಡ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.