ಅಮೆರಿಕಾದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಅವಧಿಯಲ್ಲಿ ಇಂಡೋ-ಅಮೆರಿಕನ್ ಸರ್ಜನ್ ಜನರಲ್ ಆಗಿ ನೇಮಕಗೊಂಡಿದ್ದ ವಿವೇಕ್ ಮೂರ್ತಿ ಹಲ್ಲಗೆರೆಯವರಿಗೆ ತಮ್ಮ ಹುದ್ದೆಯಿಂದ ಕೆಳಗಿಳಿಯುವಂತೆ ಟ್ರಂಪ್ ಸರ್ಕಾರ ಹೇಳಿದೆ.

ವಾಷಿಂಗ್’ಟನ್ (ಏ.22): ಅಮೆರಿಕಾದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಅವಧಿಯಲ್ಲಿ ಇಂಡೋ-ಅಮೇರಿಕನ್ ಸರ್ಜನ್ ಜನರಲ್ ಆಗಿ ನೇಮಕಗೊಂಡಿದ್ದ ವಿವೇಕ್ ಮೂರ್ತಿ ಹಲ್ಲಗೆರೆಯವರಿಗೆ ತಮ್ಮ ಹುದ್ದೆಯಿಂದ ಕೆಳಗಿಳಿಯುವಂತೆ ಟ್ರಂಪ್ ಸರ್ಕಾರ ಹೇಳಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿವೇಕ್ ಮೂರ್ತಿ ಹಲ್ಲಗೆರೆ ಸರ್ಜನ್ ಜನರಲ್ ಹುದ್ದೆಗೇರಿದ ಮೊದಲ ಇಂಡೋ-ಅಮೇರಿಕನ್ ಎನ್ನುವ ಖ್ಯಾತಿಗೆ ಭಾಜನರಾಗಿದ್ದಾರೆ.

ವಿವೇಕ್ ಮೂರ್ತಿಯವರನ್ನು ಸರ್ಜನ್ ಜನರಲ್ ಹುದ್ದೆಯಿಂದ ಕೆಳಗಿಳಿಯುವಂತೆ ಕೇಳಲಾಗಿತ್ತು. ಸರ್ಜನ್ ಜನರಲ್ ಹುದ್ದೆಯಿಂದ ರಿಲೀವ್ ಮಾಡಲಾಗಿದ್ದು, ಪಬ್ಲಿಕ್ ಹೆಲ್ತ್ ಸರ್ವಿಸ್ ಕಮಿಷನ್ ನ ಸದಸ್ಯರಾಗಿ ಮುಂದುವರೆಯಲಿದ್ದಾರೆ ಎಂದು ಅಮೆರಿಕಾ ಆರೋಗ್ಯ ಿಲಾಖೆ ಹೇಳಿದೆ.

ವಿವೇಕ್ ಹಲ್ಲಗೆರೆ ಸ್ಥಾನಕ್ಕೆ ತಮ್ಮ ದೇಶದವರನ್ನೇ ನೇಮಕ ಮಾಡುವ ಉದ್ದೇಶದಿಂದ ಇವರ ರಾಜಿನಾಮೆ ಕೇಳಲಾಗಿದೆ. ಟ್ರಂಪ್ ಆಡಳಿತದಲ್ಲಿ ಉನ್ನತ ಹುದ್ದೆಯಿಂದ ತೆಗೆದ ಹಾಕಿದ 2 ನೇ ಇಂಡೋ-ಅಮೇರಿಕನ್ ವ್ಯಕ್ತಿ ಇವರಾಗಿದ್ದಾರೆ.

ಪ್ರಸ್ತುತ ಡೆಪ್ಯುಟಿ ಸರ್ಜನ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿರುವ ಸಿಲ್ವಿಯಾ ಟ್ರೆಂಟ್ ಆ್ಯಡಮ್ಸ್ ವಿವೇಕ್ ಮೂರ್ತಿಯವರ ಸ್ಥಾನವನ್ನು ಅಲಂಕರಿಲಿದ್ದಾರೆ.

Scroll to load tweet…