ಲಾರಿ ಮಾಲಕರು ಹಾಗೂ ವಿಮೆ ನಿಯಂತ್ರಣ ಪ್ರಾಧಿಕಾರ ನಡುವೆ ನಡೆದ ಸಭೆ ಯಶಸ್ವಿಯಾಗಿದ್ದು, ವಿಮೆ ಪ್ರೀಮಿಯಮ್ ದರವನ್ನು ಕಡಿಮೆಗೊಳಿಸಲು ನಿರ್ಧರಿಸಲಾಗಿದೆ.

ಹೈದರಾಬಾದ್ (ಏ.08): ಕಳೆದ ಹತ್ತು ದಿನಗಳಿಂದ ನಡೆಯುತ್ತಿರುವ ಲಾರಿ ಮುಷ್ಕರಕ್ಕೆ ಕೊನೆಗೂ ತೆರೆಬಿದ್ದಿದೆ.

ಲಾರಿ ಮಾಲಕರು ಹಾಗೂ ವಿಮೆ ನಿಯಂತ್ರಣ ಪ್ರಾಧಿಕಾರ ನಡುವೆ ನಡೆದ ಸಭೆ ಯಶಸ್ವಿಯಾಗಿದ್ದು, ವಿಮೆ ಪ್ರೀಮಿಯಮ್ ದರವನ್ನು ಕಡಿಮೆಗೊಳಿಸಲು ನಿರ್ಧರಿಸಲಾಗಿದೆ.

ಇಂದು ಹೈದರಾಬಾದ್’ನಲ್ಲಿ ವಿಮೆ ನಿಯಂತ್ರಣ ಪ್ರಾಧಿಕಾರ ಮುಖ್ಯಸ್ಥ ವಿಜಯನ್​ ನೇತೃತ್ವದಲ್ಲಿ ದಕ್ಷಿಣ ವಲಯ ಮೋಟಾರ್ ಸಾರಿಗೆ ಕ್ಷೇಮಾಭಿವೃದ್ಧಿ ಸಂಘದ ಜೊತೆ ಸಭೆ ನಡೆದಿದೆ.

ಈ ಸಭೆಯಲ್ಲಿ ಶೇ.23ರಷ್ಟು ವಿಮೆ ಪ್ರೀಮಿಯಮ್ ದರ ಕಡಿಮೆ ಮಾಡಲು ಐಆರ್​ಡಿಎ ಒಪ್ಪಿಗೆ ನೀಡಿದೆ ದು ತಿಳಿದುಬಂದಿದೆ.