ವಿವಾದಾತ್ಮಕ ತ್ರಿವಳಿ ತಲಾಖ್ ಅರ್ಜಿ ವಿಚಾರಣೆ ಮುಕ್ತಾಯಗೊಂಡಿದ್ದು ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.
ನವದೆಹಲಿ (ಮೇ.18): ವಿವಾದಾತ್ಮಕ ತ್ರಿವಳಿ ತಲಾಖ್ ಅರ್ಜಿ ವಿಚಾರಣೆ ಮುಕ್ತಾಯಗೊಂಡಿದ್ದು ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.
ತ್ರಿವಳಿ ತಲಾಖ್’ನ ಸಾಂವಿಧಾನಿಕ ಮಹತ್ವ ಹಾಗೂ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾ. ಜೆ.ಎಸ್ ಖೇಹರ್ ನೇತೃತ್ವದ ಪಂಚ ಸದಸ್ಯ ನ್ಯಾಯಪೀಠವು ವಿಚಾರಣೆ ನಡೆಸಿದ್ದು ತೀರ್ಪನ್ನು ಕಾಯ್ದಿರಿಸಿದೆ.
ನಿನ್ನೆ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಮುಸ್ಲೀಂ ವೈಯಕ್ತಿಕ ಮಂಡಳಿಗೆ ತ್ರಿವಳಿ ತಲಾಖ್ ಕೊಡುವ ವೇಳೆ ಮಹಿಳೆ ನನಗೆ ಒಪ್ಪಿಗೆಯಿದೆ ಅಥವಾ ಇಲ್ಲವೆಂದು ಹೇಳುವ ಅವಕಾಶ ಕೊಡಲಾಗುವುದೇ?ಮಹಿಳೆಗೂ ‘ನೋ’ ಎಂದು ಹೇಳುವ ಸ್ವಾತಂತ್ರ ಕೊಡಿಯೆಂದು ನ್ಯಾಯಾಲಯ ಮುಸ್ಲೀಂ ವೈಯಕ್ತಿಕ ಮಂಡಳಿಗೆ ಹೇಳಿದೆ.
