ಬಹುಚರ್ಚಿತ ತ್ರಿವಳಿ ತಲಾಖ್  ವಿಚಾರಣೆ ನಡೆಸಲು ಐವರು ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠವನ್ನು ಸುಪ್ರೀಂಕೋರ್ಟ್ ಸ್ಥಾಪಿಸಿದೆ. ಮೇ 11 ರಂದು ವಿಚಾರಣೆ ನಡೆಯಲಿದೆ.

ನವದೆಹಲಿ (ಮಾ.30): ಬಹುಚರ್ಚಿತ ತ್ರಿವಳಿ ತಲಾಖ್ ವಿಚಾರಣೆ ನಡೆಸಲು ಐವರು ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠವನ್ನು ಸುಪ್ರೀಂಕೋರ್ಟ್ ಸ್ಥಾಪಿಸಿದೆ. ಮೇ 11 ರಂದು ವಿಚಾರಣೆ ನಡೆಯಲಿದೆ.

ಪತಿಯು 3 ಬಾರಿ ತಲಾಖ್ ಅಂತ ಹೇಳುವುದು ಕಾನೂನಿನ ಪ್ರಕಾರ ವಿಚ್ಚೇದನವಾಗುತ್ತದೆಯೇ ಎಂದು ಪ್ರಶ್ನಿಸಿ ಸುಪ್ರೀಂಕೋರ್ಟ್'ಗೆ ಕೇಂದ್ರ ಸರ್ಕಾರ ಸೇರಿದಂತೆ ಹಲವಾರು ಮಂದಿ ಅರ್ಜಿಗಳು ಸಲ್ಲಿಸಿದ್ದರು. ತ್ರಿವಳಿ ತಲಾಖನ್ನು ನಿಷೇಧಿಸುವಂತೆ ಒತ್ತಾಯಿಸಿ ಸಾಕಷ್ಟು ಅರ್ಜಿಗಳು ಬಂದಿದ್ದು ಸುಪ್ರೀಂಕೋರ್ಟ್ ವಿಚಾರಣೆ ಕೈಗೆತ್ತಿಕೊಳ್ಳ

ತ್ರಿವಳಿ ತಲಾಖ್ ನಿಷೇಧ ಮಾಡುವುದನ್ನು ಅಖಿಲ ಭಾರತ ಮುಸ್ಲೀಂ ವೈಯಕ್ತಕ ಮಂಡಳಿ ಇದನ್ನು ಖಂಡಿಸಿತ್ತು. ತಮ್ಮ ಧರ್ಮದ ನಂಬಿಕೆಗಳನ್ನು ಇದು ಉಲ್ಲಂಘಿಸುತ್ತದೆ ಎಂದು ವಾದಿಸಿದ್ದರು. ಪಾಕ್, ಇಂಡೋನೇಷ್ಯಾ ಸೇರಿದಂತೆ ಮುಸ್ಲೀಂ ದೇಶಗಳಲ್ಲೂ ಸಹ ಇದನ್ನು ನಿಷೇಧಿಸಿದ್ದಾರೆ.