ದಿಡ್ಡಳ್ಳಿ ಎಂದಾಕ್ಷಣ ನೆನೆಪಾಗುವುದು ಸರ್ಕಾರ ಇವರನ್ನು ಒಕ್ಕಲೆಬ್ಬಿಸಲು ಹೊರಟಿದ್ದು, ಹೋರಾಟ ಸಂಘಟನೆಗಳ ಆಕ್ರೋಶ, ಗಿರಿಜನರ ಬೆತ್ತಲೆ ಪ್ರತಿಭಟನೆ. ಇದಾದ ಬಳಿಕ ಜಿಲ್ಲಾಡಳಿತ ಹಾಗೂ ಸರ್ಕಾರ ಇಲ್ಲಿನ 611 ಕುಟುಂಬಗಳಿಗೆ ನಿವೇಶನ ನೀಡಲು  ಕೊಡಗು ಜಿಲ್ಲೆಯ ಸೋಮವಾರಪೇಟೆ ವ್ಯಾಪ್ತಿಯಲ್ಲಿ 17 ಏಕರೆ ಮತ್ತು ವಿರಾಜಪೇಟೆ ವ್ಯಾಪ್ತಿಯಲ್ಲಿ 8 ಎಕರೆ ಜಮೀನು ನಿಗದಿ ಪಡಿಸಿ ಇನ್ನೇನು ಹಕ್ಕು ಪತ್ರ ನೀಡಬೇಕು ಎನ್ನುವಷ್ಟರಲ್ಲಿ  ದಿಡ್ಡಳ್ಳಿಯ ಈ ಜನ ಮತ್ತೆ ನಿರ್ಧಾರ ಬದಲಿಸಿದ್ದಾರೆ. ನಮಗೆ ದಿಡ್ಡಳ್ಳಿಯಲ್ಲೇ ನಿವೇಶನ ಬೇಕು  ಎಂದು ಪಟ್ಟು ಹಿಡಿದಿದ್ದಾರೆ.

ಮಡಿಕೇರಿ(ಜ.15): ದಿಡ್ಡಳ್ಳಿ,ಈ ಹೆಸರು ಕೇಳಿದ ತಕ್ಷಣ ಸರ್ಕಾರವೇ ಬೆಚ್ಚಿ ಬಿದ್ದು ಇವರ ನೆರವಿಗೆ ಬಂದು ನಿಂತು ಇಲ್ಲಿನ ನಿರಾಶ್ರಿತರಿಗೆ ಪರ್ಯಾಯ ವ್ಯವಸ್ಥೆ ಮಾಡಲು ಮುಂದೆ ಬಂದಿತ್ತು, ಒಂದು ಹಂತದಲ್ಲಿ ಹೊಸ ಸ್ಥಳಕ್ಕೆ ತೆರಳುವುದಕ್ಕೆ ಸಿದ್ದವಾಗಿದ್ದ ವಾಸಿಗಳು ಮತ್ತೆ ರಾಗ ಬದಲಾಯಿಸಿದ್ದಾರೆ. ದಿಡ್ಡಳ್ಳಿಯೇ ನಮ್ಮ ಜನ್ಮ ಭೂಮಿ,ಅಲ್ಲೇ ನಮಗೆ ನಿವೇಶನ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ದಿಡ್ಡಳ್ಳಿ ಎಂದಾಕ್ಷಣ ನೆನೆಪಾಗುವುದು ಸರ್ಕಾರ ಇವರನ್ನು ಒಕ್ಕಲೆಬ್ಬಿಸಲು ಹೊರಟಿದ್ದು, ಹೋರಾಟ ಸಂಘಟನೆಗಳ ಆಕ್ರೋಶ, ಗಿರಿಜನರ ಬೆತ್ತಲೆ ಪ್ರತಿಭಟನೆ. ಇದಾದ ಬಳಿಕ ಜಿಲ್ಲಾಡಳಿತ ಹಾಗೂ ಸರ್ಕಾರ ಇಲ್ಲಿನ 611 ಕುಟುಂಬಗಳಿಗೆ ನಿವೇಶನ ನೀಡಲು ಕೊಡಗು ಜಿಲ್ಲೆಯ ಸೋಮವಾರಪೇಟೆ ವ್ಯಾಪ್ತಿಯಲ್ಲಿ 17 ಏಕರೆ ಮತ್ತು ವಿರಾಜಪೇಟೆ ವ್ಯಾಪ್ತಿಯಲ್ಲಿ 8 ಎಕರೆ ಜಮೀನು ನಿಗದಿ ಪಡಿಸಿ ಇನ್ನೇನು ಹಕ್ಕು ಪತ್ರ ನೀಡಬೇಕು ಎನ್ನುವಷ್ಟರಲ್ಲಿ ದಿಡ್ಡಳ್ಳಿಯ ಈ ಜನ ಮತ್ತೆ ನಿರ್ಧಾರ ಬದಲಿಸಿದ್ದಾರೆ. ನಮಗೆ ದಿಡ್ಡಳ್ಳಿಯಲ್ಲೇ ನಿವೇಶನ ಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಅರಣ್ಯ ಇಲಾಖೆ ದಿಡ್ಡಳ್ಳಿಯನ್ನು ಅರಣ್ಯ ಪೈಸರಿ ಎಂದು ಘೋಷಣೆ ಮಾಡಿಕೊಂಡಿದೆ. ಆದರೆ, ಈ ವ್ಯಾಪ್ತಿಯಲ್ಲಿ 8 ಗಿರಿಜನ ಹಾಡಿಗಳಿವೆ ಎನ್ನುವ ದಾಖಲೆಗಳೂ ಇವೆ. ಆದರೆ, ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಮುಗ್ದ ವಾಸಿಗಳಿಗೆ ಮೋಸ ಮಾಡಲು ಹೊರಟಿದೆ ಎನ್ನುವುದು ಆರೋಪ.

ಒಟ್ಟಿನಲ್ಲಿ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ಜಿಲ್ಲೆಯ ಇತರೆಡೆಗಳಲ್ಲಿನ ಗಿರಿಜನರಿಗಿಂತ ಮೊದಲು ದಿಡ್ಡಳ್ಳಿಯ ಜನರಿಗೆ ನಿವೇಶನ ಒದಗಿಸಲು ಜಿಲ್ಲಾಡಳಿತ ಮುಂದಾಗಿತ್ತು.. ಬಟ್ ದಿಡ್ಡಳ್ಳಿ ಗಿರಿಜನರು ಮಾತ್ರ ತಮಗೇ ದಿಡ್ಡಳಿಯೇ ಬೇಕು ಎಂದು ಪಟ್ಟು ಹಿಡಿದಿರೋದು ಸರ್ಕಾರಕ್ಕೆ ಮತ್ತೆ ತಲೆನೋವಾಗಿದೆ.